ಶ್ರೀದೇವಿ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ವರ್ಕ್ ವಿಭಾಗವು ಅಸ್ತಿತ್ವಕ್ಕೆ ಬಂದು 25 ಸಂವತ್ಸರ ಪೂರೈಸಿದ ಹಿನ್ನಲೆಯಲ್ಲಿ ರಜತ ಮಹೋತ್ಸವ ಸಂಭ್ರಮ ಮತ್ತು ಶ್ರೀ ದೇವಿ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ವರ್ಕ್ ಹಳೆ ವಿದ್ಯಾರ್ಥಿ ಸಂಘ ಉದ್ಘಾಟನೆ ಕೆಂಜಾರಿನ ಶ್ರೀ ದೇವಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕ್ಯಾಂಪಸ್‌ನಲ್ಲಿ ನಡೆಯಿತು. 
ಜಿಲ್ಲೆ

ಶ್ರೀದೇವಿ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ವರ್ಕ್ ರಜತ ಮಹೋತ್ಸವ ಸಂಭ್ರಮ

ಮಂಗಳೂರು: ಶ್ರೀದೇವಿ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ವರ್ಕ್ ವಿಭಾಗವು ಅಸ್ತಿತ್ವಕ್ಕೆ ಬಂದು 25 ಸಂವತ್ಸರ ಪೂರೈಸಿದ ಹಿನ್ನಲೆಯಲ್ಲಿ ರಜತ ಮಹೋತ್ಸವ ಸಂಭ್ರಮ ಮತ್ತು ಶ್ರೀ ದೇವಿ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ವರ್ಕ್ ಹಳೆ ವಿದ್ಯಾರ್ಥಿ ಸಂಘ ಉದ್ಘಾಟನೆ ಕೆಂಜಾರಿನ ಶ್ರೀ ದೇವಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕ್ಯಾಂಪಸ್‌ನಲ್ಲಿ ನಡೆಯಿತು.

ಶ್ರೀದೇವಿ ಎಜುಕೇಶನ್ ಟ್ರಸ್ಟ್ ಉಪಾಧ್ಯಕ್ಷ ನಿಧೀಶ್ ಎಸ್ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿ, ನೂತನವಾಗಿ ಅಸ್ತಿತ್ವಕ್ಕೆ ಬಂದ ಸಮಾಜಕಾರ್ಯ ವಿಭಾಗದ ಹಳೆ ವಿದ್ಯಾರ್ಥಿ ಸಂಘಟನೆಯ ಲೋಗೋ ಅನಾವರಣಗೊಳಿಸಿ ಮಾತನಾಡಿ, ಹಳೆ ವಿದ್ಯಾರ್ಥಿಗಳು ಕಾಲೇಜಿನ ಜತೆ ನಿಕಟ ಸಂಪರ್ಕದಲ್ಲಿ ಇರುವುದು ಸಮಾಜ ಕಾರ್ಯ ವಿಭಾಗದ ರಜತ ಸಂಭ್ರಮದ ಶುಭ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಹಾಗೂ ಪ್ರೇರಣೆ ನೀಡಿದೆ. ಇಂದಿನ ಯುವ ಶಕ್ತಿಯೇ ಭವಿಷ್ಯದ ರಾಷ್ಟ್ರ ಶಕ್ತಿ. ಪ್ರತಿಯೊಬ್ಬರೂ ಕೂಡಾ ಸಮಾಜದ ಸುಧಾರಣೆಗಾಗಿ ನಾವೇನು ಮಾಡಬಹುದು ಎಂಬುವುದನ್ನು ಯೋಚಿಸಬೇಕು. ಸಮಾಜಮುಖಿ ಚಿಂತನೆಗಳು ವಿದ್ಯಾರ್ಥಿಗಳಲ್ಲಿ ಜೀವಂತವಾಗಬೇಕು. ನಾವು ಪಡೆದ ಶಿಕ್ಷಣ ನಮ್ಮ ಕುಟುಂಬವನ್ನು ಸಲಹುವುದಕ್ಕೆ ಮಾತ್ರ ಸೀಮಿತವಾಗದೆ ನಮ್ಮ ಸಮಾಜಕ್ಕೂ ಉಪಯೋಗಕ್ಕೆ ಬರಬೇಕು. ಆಗ ಮಾತ್ರ ಶಿಕ್ಷಣವು ಶ್ರೇಷ್ಟತೆಯನ್ನು ಪಡೆಯಲು ಸಾಧ್ಯ ಎಂದರು.

ರೋಶನಿ ನಿಲಯದ ನಿವೃತ್ತ ಡೀನ್ ಹಾಗೂ ಮನೋರೋಗ ತಜ್ಞೆ ಡಾ. ರಮೀಳಾ ಶೇಖರ್ ಉಪಸ್ಥಿತರಿದ್ದರು. ಶ್ರೀ ದೇವಿ ಎಜುಕೇಶನ್ ಟ್ರಸ್ ನ ಅಧ್ಯಕ್ಷ ಡಾ. ಸದಾನಂದ ಶೆಟ್ಟಿ ಮತ್ತು ಉಪಾಧ್ಯಕ್ಷ ನಿಧೀಶ್ ಎಸ್.ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರತನ್ ರೈ, ಕಾರ್ಯದರ್ಶಿ ಬಾಲಕೃಷ್ಣ ಭಾತೆ ಅವರನ್ನು ಅಭಿನಂದಿಸಲಾಯಿತು.

ಶ್ರೀ ದೇವಿ ಕಾಲೇಜಿನ ಸಮಾಜಕಾರ್ಯ ವಿಭಾಗದ ಪ್ರಾಂಶುಪಾಲರಾದ ಅಬಿತಾ ಎಸ್ ಸ್ವಾಗತಿಸಿದರು, ಉಪನ್ಯಾಸಕಿ ಅಶ್ವಿನಿ ಆರ್ ಕರ್ಕೇರ ಧನ್ಯವಾದ ನೀಡಿದರು, ವಿದ್ಯಾರ್ಥಿನಿ ದೀಪಾ ಹಾಗೂ ಮೇಘನಾ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದ ಬಳಿಕ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

------------------

ತ್ತಡ ರಹಿತ ಬದುಕಿನಿಂದ ಮಾನಸಿಕ ಆರೋಗ್ಯ ಸಾಧ್ಯ

ಮನುಷ್ಯನ ಮಾನಸಿಕ ಆರೋಗ್ಯದ ಸಮತೋಲನ ಕಾಯ್ದುಕೊಳ್ಳವುದು ಮುಖ್ಯ, ಈ ನಿಟ್ಟಿನಲ್ಲಿ ಒತ್ತಡ ರಹಿತ ನೆಮ್ಮದಿ ಬದುಕಿನ ಬಗ್ಗೆ ಯುವಜನತೆ ಸಾಗಬೇಕಾಗಿದೆ. ಮಾನಸಿಕ ಅರೋಗ್ಯ ಸಮಸ್ಯೆಗಳು ಮತ್ತು ಮಾನಸಿಕ ಸಮಸ್ಯೆಗಳು ಇದಕ್ಕೆ ಅನುಗುಣವಾಗಿ ಪರಿಸ್ಥಿತಿಯನ್ನು ಹೇಗೆ ನಿಬಾಸಿಬೇಕೆಂದು ತಿಳಿದಿರಬೇಕು. ವಿದ್ಯಾರ್ಥಿಗಳಿಗಳು ತಮ್ಮ ಸಾಮರ್ಥ್ಯವನ್ನು ಬಳಸಿಕೊಂಡಾಗ ಅವರು ಮಾನಸಿಕವಾಗಿ ಅರೋಗ್ಯವಾಗಿರುತ್ತಾರೆ ಎಂದು ರೋಶನಿ ನಿಲಯದ ನಿವೃತ್ತ ಡೀನ್ ಹಾಗೂ ಮನೋರೋಗ ತಜ್ಞೆ ಡಾ. ರಮೀಳಾ ಶೇಖರ್ ಕ್ಷೇತ್ರ ಕಾರ್ಯದ ಮಹತ್ವದ ಕುರಿತು ವಿವರಿಸಿದರು.