ಗುಂಡ್ಲುಪೇಟೆ ರಥಸಪ್ತಮಿಯ ಅಂಗವಾಗಿ ಪಟ್ಟಣದ ಅಧಿದೇವತೆ ಶ್ರೀ ವಿಜಯ ನಾರಾಯಣಸ್ವಾಮಿ ದೇವಾಲಯದ ರಥೋತ್ಸವ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. 
ಜಿಲ್ಲೆ

ಶ್ರೀ ವಿಜಯ ನಾರಾಯಣಸ್ವಾಮಿ ರಥೋತ್ಸವ

ಗುಂಡ್ಲುಪೇಟೆ: ರಥಸಪ್ತಮಿಯ ಅಂಗವಾಗಿ ಬುಧವಾರ ಪಟ್ಟಣದ ಅಧಿದೇವತೆ ಶ್ರೀ ವಿಜಯ ನಾರಾಯಣಸ್ವಾಮಿ ದೇವಾಲಯದ ರಥೋತ್ಸವ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.

ಈ ಅಂಗವಾಗಿ ದೇವಾಲಯದಲ್ಲಿ ಬೆಳಗ್ಗಿನಿಂದಲೂ ಉತ್ಸವ ಮೂರ್ತಿಗಳನ್ನು ಬಣ್ಣಬಣ್ಣದ ಹೂವುಗಳಿಂದ ಅಲಂಕರಿಸಿ ವಿಜಯನಾರಾಯಣನಿಗೆ ವಿಶೇಷ ಪೂಜೆಗಳನ್ನು ಆಯೋಜಿಸಲಾಗಿತ್ತು. ಮಧ್ಯಾಹ್ನ ಮುಜರಾಯಿ ಅಧಿಕಾರಿಯೂ ಆದ ತಹಸೀಲ್ದಾರ್ ಟಿ.ರಮೇಶ್ ಬಾಬು ಹಾಗೂ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ರಥಕ್ಕೆ ಪೂಜೆ ಸಲ್ಲಿಸಿದ ನಂತರ ಭಕ್ತರು ರಥವನ್ನು ದೇವಾಲಯ ಸುತ್ತಲೂ ಒಂದು ಸುತ್ತು ಎಳೆದು ಸ್ವಸ್ಥಾನದಲ್ಲಿ ನಿಲ್ಲಿಸಿದರು. ಹರಕೆ ಹೊತ್ತ ಭಕ್ತರು ಮಜ್ಜಿಗೆ, ಪಾನಕ ಮುಂತಾದ ಪ್ರಸಾದವನ್ನು ವಿನಿಯೋಗ ಮಾಡಿದರು.