ಜಿಲ್ಲೆ

ಶ್ರೀ ವೀರಭದ್ರೇಶ್ವರ ಜಾತ್ರಾ ಸಂಭ್ರಮ

ಸೋಮನಾಥ ರೆಡ್ಡಿ

ನರಗುಂದ: ಪಟ್ಟಣದ ಕಸಬಾ ಬಡಾವಣೆಯ ಐತಿಹಾಸಿಕ ಶ್ರೀ ವೀರಭದ್ರ ಸ್ವಾಮಿಯ ಜಾತ್ರೆ ಇತ್ತೀಚೆಗೆ ಶ್ರದ್ಧಾಭಕ್ತಿಯಿಂದ ನೆರವೇರಿತು.

ಕಪಿಲಯ್ಯ ಹಿರೇಮಠ ನೇತೃತ್ವದಲ್ಲಿ ಶ್ರೀವೀರಭದ್ರಸ್ವಾಮಿಗೆ ಪುಷ್ಪಾಲಂಕಾರ, ರುದ್ರಾಭಿಷೇಕ, ವಿಶೇಷ ಪೂಜೆ ಜರುಗಿದವು. ಯಲವಿಗಿಯ ಸೋಮಲಿಂಗಪ್ಪ ಚನ್ನೂರ ಪುರವಂತರಿಂದ ಗುಗ್ಗುಳ ನೆರವೇರಿತು. ವಿವಿಧ ವಾದ್ಯ ವೈಭವ, ವೀರಗಾಸೆಯೊಂದಿಗೆ ಶ್ರೀ ವೀರಭದ್ರೇಶ್ವರ ಸ್ವಾಮಿಯ ನೂತನ ಕಂಚಿನ ಮೂರ್ತಿ ಮೆರವಣಿಗೆ, ಅಗ್ನಿಪ್ರವೇಶ ಕಾರ್ಯಕ್ರಗಳು ನೆರವೇರಿದವು.

ಶ್ರೀ ವೀರಭದ್ರಸ್ವಾಮಿಯ ಪಲ್ಲಕ್ಕಿ ನಿರ್ಮಾಣಕ್ಕೆ ಧನಸಹಾಯ ಮಾಡಿದ ಜಿ.ಎಂ. ಆನೆಗುಂದಿ, ಎಸ್.ಎಸ್. ವಾಳದ, ನೀಲವ್ವ ಮಠಪತಿ, ಮಂಜುನಾಥ ಹಿರೇಮಠ, ಪ್ರಭು ಲೆಂಗೆ, ರಾಮೇಶ್ವರಪ್ಪ ನಾಗಠಾಣ ಹಾಗೂ ಪಲ್ಲಕ್ಕಿ ತಯಾರಕ ಮಲ್ಲಿಕಾರ್ಜುನ ಬಡಿಗೇರ ಅವರನ್ನು ಸನ್ಮಾನಿಸಲಾಯಿತು.

ಕೆ.ಎಂ. ನಾಗಠಾಣ, ಭೀಮನಗೌಡ ಕೊಪ್ಪನಗೌಡ್ರ, ಚನ್ನಯ್ಯ ಮಠಪತಿ, ಸಂತೋಷ ಆನೇಗುಂದಿ, ನಾಗಪ್ಪ ಲೆಂಗೆ, ಚಂದ್ರು ಲೆಂಗೆ, ಚಂದ್ರು ಹಳಕಟ್ಟಿ, ಬಿ.ವಿ. ಹಲಗತ್ತಿ, ಕುಮಾರ ಸರಗಣಾಚಾರಿ, ಈರಣ್ಣ ಸುನ್ನಾಳ, ಶಿವರಾಜ ನಾಗಠಾಣ ಇದ್ದರು.