ಜಿಲ್ಲೆ

ಶ್ರೀ ವೀರಭದ್ರೇಶ್ವರ ಗುಗ್ಗಳ ಮಹೋತ್ಸವ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ಇಲ್ಲಿನ ಮೃತ್ಯುಂಜಯ ನಗರದ ಕೊಟ್ಟಣದ ಓಣಿಯ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಮೊದಲ ದಿನವಾದ ಶುಕ್ರವಾರ ಗುಗ್ಗಳ ಮಹೋತ್ಸವ ಜರುಗಿತು.

ಅಮ್ಮಿನಭಾವಿಯ ಶ್ರೀ ಅಭಿನವ ಶಾಂತಲಿ0ಗ ಶಿವಾಚಾರ್ಯ ಸ್ವಾಮೀಜಿ, ಸುಳ್ಳದ ಶ್ರೀ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗೂ ಹೂವಿನಹಡಗಲಿಯ ಶ್ರೀ ಚನ್ನವೀರ ಸ್ವಾಮೀಜಿ ಚಾಲನೆ ನೀಡಿದರು.

ಗುತ್ತಲದ ಪ್ರಸಿದ್ಧ ಪುರವಂತರು ಓಡಪುಗಳನ್ನು ಹೇಳಿದರು. ಗುಗ್ಗಳದ ಮೆರವಣಿಗೆಯು ದೇವಸ್ಥಾನದಿಂದ ಆರಂಭಗೊ0ಡು ಸವದತ್ತಿ ರಸ್ತೆ, ತೋಟಿಗೇರ ಓಣಿ, ಮೂರುಸಾವಿರ ಮಠ ರಸ್ತೆ, ಡಿಪೋ ವೃತ್ತದ ಮುಖಾಂತರ, ಅರಿಗೇರಿ ಓಣಿ, ಬಣಗಾರ ಓಣಿ, ಮುರುಘಾಮಠಕ್ಕೆ ಬಂದು ಪೂಜೆ ಸಲ್ಲಿಸಲಾಯಿತು. ನಂತರ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಆಗಮಿಸಿತು. ಮಹಿಳೆಯರು ಆರತಿಯೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ವಿವಿಧ ವಾದ್ಯ ಮೇಳಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು. ನೂರಾರು ಭಕ್ತರು ಕೆಂಡ ಹಾಯುವ ಮುಖಾಂತರ ಗುಗ್ಗಳ ಸಂಪಣ್ಣಗೊ0ಡಿತು.

ವೀರಭದ್ರೇಶ್ವರ ದೇವಸ್ಥಾನದ ಅಧ್ಯಕ್ಷ ಅರವಿಂದ ಏಗನಗೌಡರ, ಮೃತ್ಯುಂಜಯ ಸಿದ್ನಾಳ, ದೀಪಕ ಇಂಡಿ, ಸಿದ್ದಪ್ಪ ಕರಡಿಗುಡ್ಡ,  ಮಹಾಂತೇಶ ಕುರಟ್ಟಿದೇಸಾಯಿ, ಸುರೇಶ ಅರಕೇರಿ, ಮಹಾಂತೇಶ ಗೊರವನಕೊಳ್ಳ, ಸೋಮಣ್ಣ ಗೋಡಿಕಟ್ಟಿ, ಶಿವಯೋಗಿ ಹಂಚಿನಾಳ, ಗುರುಸಿದ್ದಪ್ಪ ಭಾವಿಕಟ್ಟಿ, ಪ್ರಭು ಕಲ್ಲಾಪುರ ಸೇರಿ ಸಾವಿರಾರು ಭಕ್ತರು ಭಾಗವಹಿಸಿದ್ದರು. ಮೃತ್ಯುಂಜಯ ಯುವಕ ಮಂಡಳದಿ0ದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.