ಜಿಲ್ಲೆ

ಶ್ರೀ ವೀರಭದ್ರ ಸ್ವಾಮಿ ಜಯಂತಿ

ಪಂಕಜ ಕೆ.ಎಂ.

ಬೆಂಗಳೂರು: ಭಾದ್ರಪದ ಮಾಸದ ಮೊದಲ ಮಂಗಳವಾರ (ಸೆ.3) ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ವತಿಯಿಂದ ಪುರಾಣ ಪ್ರಸಿದ್ಧ ಶ್ರೀರಾಮನ ಬಂಟ ಶ್ರೀ ಆಂಜನೇಯ ಸ್ವಾಮಿಗೆ ಲಿಂಗದೀಕ್ಷೆ ನೀಡಿದ ಶ್ರೀ ವೀರಭದ್ರ ಸ್ವಾಮಿ ದೇವರ ಜಯಂತಿ ಆಚರಿಸಲಾಗುತ್ತಿದೆ.

ಅಂದು ನಾಡಿನೆಲ್ಲೆಡೆ ಸ್ವಾಮೀಯ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲು ಸಿದ್ಧತೆ ನಡೆಸಲಾಗಿದೆ. ಸ್ವಾಮಿಯ ಭಕ್ತರು ತಮ್ಮ ಗ್ರಾಮಗಳಲ್ಲಿನ ವೀರಭದ್ರೇಶ್ವರ ದೇವಾಲಯ ಇಲ್ಲವೆ ಕಲ್ಯಾಣ ಮಂಟಪ, ಸಮುದಾಯ ಭವನಗಳಲ್ಲಿ ಶ್ರೀ ವೀರಭದ್ರ ಸ್ವಾಮಿ ಜಯಂತಿಯನ್ನು ವಿಶೇಷ ಪೂಜೆ, ಪ್ರಾರ್ಥನೆಯೊಂದಿಗೆ ಶ್ರದ್ಧಾ ಭಕ್ತಿಯಿಂದ ಆಚರಿಸುವಂತೆ ವೇದಿಕೆಯ ರಾಷ್ಟ್ರೀಯ ಅಧ್ಯಕ್ಷ ಪ್ರದೀಪ ಕಂಕಣವಾಡಿ ಮನವಿ ಮಾಡಿದ್ದಾರೆ.