ತಿ.ನರಸೀಪುರ: ದಕ್ಷಿಣಕಾಶಿ ಎಂದು ಪ್ರಸಿದ್ಧಿ ಪಡೆದಿರುವ ಶ್ರೀ ಗಜಾರಣ್ಯ ಕ್ಷೇತ್ರ ತಾಲೂಕಿನ ತಲಕಾಡು ಗ್ರಾಮದಲ್ಲಿ ನೆಲೆಸಿರುವ ಶ್ರೀ ಮನೋನ್ಮನ್ಯಂಬಾ ಸಮೇತ ಶ್ರೀ ವೈದ್ಯನಾಥೇಶ್ವರಸ್ವಾಮಿ ಅವರ ಬ್ರಹ್ಮರಥೋತ್ಸವವು ಏ.9ರಂದು ಜರುಗಲಿದೆ.
ಶ್ರೀ ವೈದ್ಯನಾಥೇಶ್ವರಸ್ವಾಮಿ ದೇವಾಲಯದಲ್ಲಿ ಬುಧವಾರ ಅಂಕುರಾರ್ಪಣದ ಮೂಲಕ ಧಾರ್ಮಿಕ ಉತ್ಸವಗಳಿಗೆ ವಿಧ್ಯುಕ್ತವಾಗಿ ಚಾಲನೆ ನೀಡಲಾಗಿದೆ. ಏ.3ರಂದು ಧ್ವಜಾರೋಹಣ, ಏ.4ರಂದು ಚಂದ್ರಮಂಡಲಾರೋಹಣ, ಏ.5ರಂದು ಅನಂತಪೀಠಾರೋಹಣ, ಏ.6ರಂದು ಪುಷ್ಪಮಂಟಪಾರೋಹಣ, ಏ.7ರಂದು ವೃಷಭಾರೋಹಣ, ಏ.8ರಂದು ಗಿರಿಜಾ ಕಲ್ಯಾಣ ಮತ್ತು ಗಜಾರೋಣ, ಏ.9ರಂದು ಶ್ರೀ ಮದ್ದಿವ್ಯ ಬ್ರಹ್ಮರಥೋತ್ಸವ ಜರುಗಲಿದೆ.
ಏ.10 ರಂದು ಶಯನೋತ್ಸವ, 11ರಂದು ಅವಭೃತ ತೀರ್ಥಸ್ನಾನ, ಪುಷ್ಪಪಲ್ಲಕ್ಕಿ ಉತ್ಸವ, ಏ.12ರಂದು ಮಹಾಭಿಷೇಕ, ಕೈಲಾಸ ವಾಹನೋತ್ಸವ ಹಾಗೂ ಏ.13ರಂದು ನಂದಿ ವಾಹನೋತ್ಸವದೊಂದಿಗೆ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.
ನಿಗದಿತ ಆಯಾಯ ದಿನಗಳಲ್ಲಿಯೇ ಧಾರ್ಮಿಕ ಪೂಜಾ ಕಾರ್ಯ ನಡೆಯುವುದರಿಂದ ತಲಕಾಡು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ವೈದ್ಯನಾಥೇಶ್ವರನ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ವೈದ್ಯನಾಥೇಶ್ವರ ಸ್ವಾಮಿ ಹಾಗೂ ಸಮೂಹ ದೇವಾಲಯಗಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ನಾಗರಾಜು ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಂ.ವೆಂಕಟೇಶ್ ಪ್ರಸಾದ್ ಪ್ರಕಟಣೆಯಲ್ಲಿ ಕೋರಿದ್ದಾರೆ.