ಗಂಗಾವತಿ ತಾಲೂಕಿನ ನವವೃಂದಾವನಗಡ್ಡಿಯಲ್ಲಿ ಹಮ್ಮಿಕೊಂಡಿದ್ದ ಶ್ರೀ ಸುಧೀಂದ್ರ ತೀರ್ಥರ ಮಧ್ಯಾರಾಧನೆಯಲ್ಲಿ ಮಂತ್ರಾಲಯ ಮಠದ ಶ್ರೀ ಸುಬುಧೇಂದ್ರ ತೀರ್ಥರು ಮತ್ತು ಶ್ರೀಪಾದರಾಜರ ಮಠದ ಶ್ರೀ ಸುಜಯನಿಧಿ ತೀರ್ಥರು ವಿಶೇಷ ಪೂಜೆ ಭಾನುವಾರ ಸಲ್ಲಿಸಿದರು. 
ಜಿಲ್ಲೆ

ಶ್ರೀ ಸುಧೀಂದ್ರ ತೀರ್ಥರ ಮಧ್ಯಾರಾಧನೆ ಸಂಪನ್ನ

ಗಂಗಾವತಿ: ತಾಲೂಕಿನ ಆನೆಗೊಂದಿ ಐತಿಹಾಸಿಕ ಪ್ರಸಿದ್ಧ ನವವೃಂದಾವನಗಡ್ಡಿಯಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ ಗುರುಗಳಾದ ಮಧ್ವ ಪರಂಪರೆಯ ಶ್ರೀ ಸುಧೀಂದ್ರ ತೀರ್ಥರ ಮಧ್ಯಾರಾಧನೆ ಭಾನುವಾರ ಸಂಪನ್ನವಾಯಿತು.

ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಮತ್ತು ಶ್ರೀಪಾದರಾಜ ಮಠದ ಪೀಠಾಧಿಪತಿ ಶ್ರೀಸುಜಯನಿಧಿ ತೀರ್ಥರ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು.

ವೃಂದಾವನಕ್ಕೆ ನಿರ್ಮಾಲ್ಯ ವಿಸರ್ಜನೆ, ಪಂಚಾಮೃತಾಭಿಷೇಕ, ಹೂವಿನ ಅಲಂಕಾರ, ಅಷ್ಟೋತ್ತರ ಪಾರಾಯಣ, ಮೂಲರಾಮದೇವರ ಸಂಸ್ಥಾನ ಪೂಜೆ, ಪಂಡಿತರಿಂದ ಉಪನ್ಯಾಸ, ಭಜನೆ, ಭಕ್ತರಿಗೆ ಲಮಂತ್ರಾಕ್ಷತೆ ಮತ್ತು ತೀರ್ಥ ಪ್ರಸಾದ ವಿತರಣೆ ಜರುಗಿತು.

ಆನೆಗೊಂದಿ ರಾಯರ ಮಠದಲ್ಲಿ ಆಶೀರ್ವಚನ ನೀಡಿದ ಮಂತ್ರಾಲಯದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು, ನವವೃಂದಾವನಗಡ್ಡಿಯಲ್ಲಿ ಶ್ರೇಷ್ಠ ಯತಿವರ್ಯರು ವಿರಾಜಮಾನರಾಗಿದ್ದು, ಆರಾಧನೋತ್ಸವ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರೀಮಠದಿಂದ ಹಮ್ಮಿಕೊಳ್ಳಲಾಗುತ್ತಿದೆ. ಮಾ.17ರಿಂದ ಜರುಗಲಿರುವ ವ್ಯಾಸರಾಜ ಗುರುಸಾರ್ವಭೌಮದ ಆರಾಧನೆ ಮಹೋತ್ಸವದಲ್ಲಿ ರಾಯರ ಮಠದ ಭಕ್ತರು ಪಾಲ್ಗೊಳ್ಳುವ ಮೂಲಕ ಧಾರ್ಮಿಕ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಸಲಹೆ ನೀಡಿದರು.

ವೃಂದಾವನದ ಕುರಿತು ಪಂಡಿತರಾದ ದ್ವಾರಕನಾಥಾಚಾರ್ ಮತ್ತು ಗುಂಜಾಳ್ಳಿ ನರಹರಿಆಚಾರ್ ವಿಶೇಷ ಉಪನ್ಯಾಸ ನೀಡಿದರು.

ಗಂಗಾವತಿ ರಾಯರ ಮಠದ ವ್ಯವಸ್ಥಾಪಕ ಗುರುರಾಜಾಚಾರ್ ಸಾಮವೇದ, ಆನೆಗೊಂದಿ ರಾಯರ ಮಠದ ವ್ಯವಸ್ಥಾಪಕ ಸುಮಂತಕುಲ್ಕರ್ಣಿ, ಮುಖಂಡರಾದ ಸುಶಿಲೇಂದ್ರಾಚಾರ್, ಭೀಮಸೇನಾಚಾರ್,ಪವನಾಚಾರ್, ಅನಂತ ಪುರಾಣಿಕ, ಪ್ರಕಾಶ ಕರಣಂ, ಗೋಪಿ, ಪ್ರವೀಣಾಚಾರ್, ಸಂಜೀವ್ ಕುಲ್ಕರ್ಣಿ, ಅರ್ಚಕರಾದ ವೀಜೇಂದ್ರಾಚಾರ್‌ಚಳ್ಳಾರಿ, ಶ್ರೀನಿವಾಸಾಚಾರ್,ವಿಜಯಢಣಾಪುರ, ಪ್ರಹ್ಲಾದ ಕುಲ್ಕರ್ಣಿ, ಹೇರೂರು ಪ್ರಹ್ಲಾದರಾವ್, ವಾಮನರಾವ್ ಮುಕ್ತೇದಾರ್ ಇತರರಿದ್ದರು.

ಮೂರ್ತಿ ಪ್ರಾಣ ಪ್ರತಿಷ್ಠಾಪನೆ

ತಾಲೂಕಿನ ಆನೆಗೊಂದಿಯ ಶ್ರೀವ್ಯಾಸರಾಜ ಮಠದಲ್ಲಿ ಶ್ರೀ ಮುಖ್ಯಪ್ರಾಣ ದೇವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಭಾನುವಾರ ನೆರವೇರಿಸಲಾಯಿತು. ಮಂತ್ರಾಲಯ ಮಠದ ಶ್ರೀ ಸುಬುಧೇಂದ್ರ ತೀರ್ಥರು, ಸೋಸಲೆ ವ್ಯಾಸರಾಜಮಠದ ಶ್ರೀ ವಿದ್ಯಾಶ್ರೀಶ ತೀರ್ಥರು ಮತ್ತು ಶ್ರೀಪಾದರಾಜ ಮಠದ ಶ್ರೀಸುಜಯನಿಧಿ ತೀರ್ಥರ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ವಾದ್ಯ, ವೇದ ೋಷಗಳೊಂದಿಗೆ ಅದ್ದೂರಿಯಾಗಿ ಪ್ರಾಣಪ್ರತಿಷ್ಠಾಪನೆ ನೆರವೇರಿಸಲಾಯಿತು. ವಿವಿಧ ಜಿಲ್ಲೆಯ ಭಕ್ತರು ಭಾಗವಹಿಸಿದ್ದರು.