ನವಲಿ ಹಿರೇಮಠದ ಶ್ರೀ ಸಿದ್ಧಲಿಂಗ ತಾತನವರ ದೇಗುಲದಲ್ಲಿ ಕಾರ್ತಿಕ ಅಮಾವಾಸ್ಯೆ ನಿಮಿತ್ತ ದೀಪಾಲಂಕಾರ ಮಾಡಲಾಗಿತ್ತು.  
ಜಿಲ್ಲೆ

ನವಲಿ ಹಿರೇಮಠದ ಮಹಾ ದೀಪೋತ್ಸವಕ್ಕೆ ತೆರೆ

ಕುರುವತ್ತಿ ಶ್ರೀಕಾಂತಪ್ಪ

ಕನಕಗಿರಿ: ತಾಲೂಕಿನ ನವಲಿ ಹಿರೇಮಠದ ಪವಾಡ ಪುರುಷ, ಶರಣ ಲಿಂ. ಶ್ರೀ ಸಿದ್ಧಲಿಂಗ ತಾತನವರ ದೇಗುಲದಲ್ಲಿ ಕಾರ್ತಿಕ ಮಾಸದ ನಿಮಿತ್ತ ಮಂಗಳವಾರ ರಾತ್ರಿ ಸಂಭ್ರಮದಿಂದ ಮಹಾ ದೀತ್ಸವ ನಡೆಯಿತು.

ದೀಪೋತ್ಸವ ನಿಮಿತ್ತ ಬೆಳಗ್ಗೆ ಸಿದ್ಧಲಿಂಗ ತಾತನ ಕರ್ತೃ ಗದ್ದಿಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಮಹಾ ಮಂಗಳಾರತಿ ಕಾರ್ಯಕ್ರಮ ನೆರವೇರಿದವು. ಬಳಿಕ ತಾತನವರ ವಂಶಸ್ಥರಿಂದ ಭಕ್ತಾದಿಗಳಿಗೆ ಮಹಾ ಅನ್ನ ಸಂತರ್ಪಣೆ ನೆರವೇರಿತು. ತಾತನವರ ವಂಶಸ್ಥರಾದಿಯಾಗಿ ಶಿಷ್ಯ ಹಾಗೂ ಭಕ್ತ ವೃಂದ ತಾತನ ಕರ್ತೃ ಗದ್ದಿಗೆಗೆ ಕಾಯಿ, ಕರ್ಪೂರ, ಪುಷ್ಪ, ನೈವೈದ್ಯ ಸಮರ್ಪಿಸಿ ಭಕ್ತಿ ಮೆರೆಯಿತು.

ಬಾಣ-ಬಿರುಸುಗಳ ಪ್ರದರ್ಶನ: ರಾತ್ರಿ ತಾತನವರ ವಂಶಸ್ಥರಿಂದ ದೇಗುಲದಲ್ಲಿ ಮಹಾ ದೀಪೋತ್ಸವ ನೆರವೇರಿತು. ಬಳಿಕ ಬಾಣ, ಬಿರುಸುಗಳ ಪ್ರದರ್ಶನ ನಡೆಯಿತು. ವಿವಿಧ ಕಲಾವಿದರು, ಮಕ್ಕಳಿಂದ ನೆರವೇರಿದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದವರ ಮನ ಸೆಳೆದವು.

ಪಾಲಕರಿಗೆ ಸನ್ಮಾನ: ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಿಸಿದ ವಿದ್ಯಾರ್ಥಿಗಳ ಪಾಲಕರನ್ನು ನವಲಿ ಹಿರೇಮಠದ ಹಿರಿಯರು ಗೌರವಿಸಿ ಶಿಕ್ಷಣಕ್ಕೆ ಒತ್ತು ನೀಡಲು ಪ್ರೋತ್ಸಾಹಿಸಿದರು.

ಕಳೆದ ದೀಪಾವಳಿ ಪಾಢ್ಯದಿಂದ ಛಟ್ಟಿ ಅಮಾವಾಸ್ಯೆವರೆಗೆ ಅಂದರೆ ತಿಂಗಳ ಕಾಲ ಹಿರೇಮಠ ಶ್ರೀ ಸಿದ್ಧಲಿಂಗತಾನವರ ದೇಗುಲದಲ್ಲಿ ಜರುಗಿದ ದೀಪೋತ್ಸವ ಕಾರ್ಯಕ್ರಮ ಬುಧವಾರ ರಾತ್ರಿ ತೆರೆ ಕಂಡಿತು.