ಜಿಲ್ಲೆ

ಸನಾತನ ಧರ್ಮಕ್ಕೆ ಶ್ರೀ ಶಂಕರರ ಕೊಡುಗೆ ದೊಡ್ಡದು

ಪ್ರಶಾಂತ ಜಿ. ಭಾಗ್ವತ

ಉದ್ಯಮಿ ಮುಕುಂದ ಪ್ರಭು ಅಭಿಮತ

ಶಿವಪಾಡಿಯಲ್ಲಿ ಜಯಂತಿ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಸನಾತನ ಧರ್ಮ, ಸಂಸ್ಕೃತಿಯ ಉಳಿವಿಗಾಗಿ ಭಾರತದಾದ್ಯಂತ ಸಂಚರಿಸಿ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಆಮ್ನಾಯ ಪೀಠಗಳನ್ನು ಸ್ಥಾಪಿಸಿ, ಭಾರತದ ಶ್ರೇಷ್ಠತೆ ಹಾಗೂ ಪರಂಪರೆಯನ್ನು ಜಗದಾದ್ಯಂತ ಪಸರಿಸುವಲ್ಲಿ ಶ್ರೀ ಶಂಕರಾಚಾರ್ಯರ ಕೊಡುಗೆ ಅಪಾರವಾಗಿದೆ ಎಂದು ಗೋವಾದ ಉದ್ಯಮಿ ಮುಕುಂದ ಪ್ರಭು ಹೇಳಿದರು.

ಮಣಿಪಾಲ ಸಮೀಪದ ಶಿವಪಾಡಿ ಉಮಾಮಹೇಶ್ವರ ದೇಗುಲದ ಸಭಾಂಗಣದಲ್ಲಿ ಶಂಕರಾಚಾರ್ಯರ ಜಯಂತಿ ನಿಮಿತ್ತ ಮೇ 2ರಂದು ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಉಮಾಮಹೇಶ್ವರ ದೇಗುಲದ ಆಡಳಿತ ಮೊಕ್ತೇಸರ ಮಹೇಶ ಠಾಕೂರ್​, ಶುಭಕರ ಸಾಮಂತ್​, ವಿಜಯಾ ಮುಕುಂದ ಪ್ರಭು, ಅಭಿವೃದ್ಧಿ ಟ್ರಸ್ಟ್​ನ ಅಧ್ಯಕ್ಷ ದಿನೇಶ ಪ್ರಭು, ಶಾಶ್ವತ ಟ್ರಸ್ಟಿ ದಿನೇಶ ಸಾಮಂತ್​, ಟ್ರಸ್ಟಿಗಳಾದ ಅಶೋಕ ಸಾಮಂತ್​, ಪ್ರಕಾಶ ಪ್ರಭು, ವಿಷ್ಣುದಾಸ ಪಾಟೀಲ್​ ಇತರರು ಉಪಸ್ಥಿತರಿದ್ದರು.