ಕೆ.ಎಂ.ದೊಡ್ಡಿ: ಸಮೀಪದ ಅರೇಚಾಕನಹಳ್ಳಿ ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀ ಶಂಭುಲಿಂಗೇಶ್ವರಸ್ವಾಮಿ ವಿಶೇಷ ಪೂಜಾ ಮಹೋತ್ಸವ ಮತ್ತು ಕೊಂಡೋತ್ಸವ ಏ.20ರಿಂದ ಆರಂಭಗೊಳ್ಳಲಿದೆ.
ಶ್ರೀ ಶಂಭುಲಿಂಗೇಶ್ವರಸ್ವಾಮಿ, ಶ್ರೀ ಕದಗಾರಲಿಂಗೇಶ್ವರ ಮತ್ತು ಶ್ರೀ ದೇವಮ್ಮ ದೇವರ ಉತ್ಸವ ಹಾಗೂ ಶ್ರೀ ಭೈರವೇಶ್ವರ ದೇವರ ಕೊಂಡೋತ್ಸವದ ಹಿನ್ನೆಲೆಯಲ್ಲಿ ಏ.20ರಂದು ಸಂಜೆ ಬಂಡಿ ಉತ್ಸವ ಜರುಗಲಿದೆ.
ಏ.21ರಂದು ಬೆಳಗಿನ ಜಾವ ಬಾಯಿಬೀಗ, ಕೊಂಡೋತ್ಸವ, ಮುಡಿಸೇವೆ ಹಾಗೂ ಅರೇಚಾಕನಹಳ್ಳಿ ಶ್ರೀ ಶಂಭುಲಿಂಗೇಶ್ವರ ಬಸವಪ್ಪ, ಕೆ.ಶೆಟ್ಟಹಳ್ಳಿ ಶ್ರೀ ಬೊಮ್ಮಲಿಂಗೇಶ್ವರ ಬಸವಪ್ಪ, ಶ್ರೀ ಭೈರವೇಶ್ವರ ಮತ್ತು ಶ್ರೀ ಮಾರಮ್ಮ ದೇವರ ಪೂಜೆ ಮತ್ತು ಕರಡಕೆರೆ ಆಂಜನೇಯಸ್ವಾಮಿ ಬಸಪ್ಪನವರ ಉಪಸ್ಥಿತಿಯಲ್ಲಿ ಮಧ್ಯಾಹ್ನ 12ಕ್ಕೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
ಬೆಂಗಳೂರಿನ ಮರಿಯಪ್ಪನ ಪಾಳ್ಯ, ಸಾವಂದಿಪುರ, ಸಾಮಂದಿಪುರ ಅರೆಕಲ್‌ದೊಡ್ಡಿ, ಕಳ್ಳಮೆಳೆದೊಡ್ಡಿ, ಮುಟ್ಟನಹಳ್ಳಿ, ಗುರುದೇವರಹಳ್ಳಿ, ಗುವ್ವಾಪುರ, ಹಾಡ್ಲಿ, ಯಡಗನಹಳ್ಳಿ, ಕಡಿಲುವಾಗಿಲು, ಆಲದಹಳ್ಳಿ, ಮಾದರಹಳ್ಳಿ, ಮಂಡ್ಯ ಹೊಸಹಳ್ಳಿ, ದೇವರಹಳ್ಳಿ, ಕೆ.ಪಿ. ದೊಡ್ಡಿ, ಮೈಸೂರು, ಎಲೆತೋಟದಹಳ್ಳಿ, ಉಪ್ಪಗೆರೆದೊಡ್ಡಿ, ಕಾಡುಕೊತ್ತನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಂದ ದೇವರ ಕುಲದವರು ಆಗಮಿಸಲಿದ್ದಾರೆ.
ಅರೇಚಾಕನಹಳ್ಳಿ ಗ್ರಾಮದಲ್ಲಿ ಶ್ರೀ ಭೈರವೇಶ್ವರಸ್ವಾಮಿ ಮತ್ತು ಶ್ರೀ ಶಂಭುಲಿಂಗೇಶ್ವರಸ್ವಾಮಿ ಮತ್ತು ಶ್ರೀ ದೇವಮ್ಮ ಕದಗಾರಲಿಂಗೇಶ್ವರ ಮತ್ತು ಶ್ರೀ ಮಾರಮ್ಮ, ಶ್ರೀ ಶನಿದೇವರುಗಳ ಬಿರುದುಗಳು ಮತ್ತು ವಿಶೇಷ ಪೂಜಾ ಮಹೋತ್ಸವವನ್ನು ಬಸಪ್ಪಗಳ ಮೆರವಣಿಗೆಯನ್ನು ಏರ್ಪಡಿಸಲಾಗಿದೆ.
ಬೆಂಗಳೂರು ಭಕ್ತಾದಿಗಳಿಂದ ಶ್ರೀ ಶಂಭುಲಿಂಗೇಶ್ವರ ಸ್ವಾಮಿ ಮತ್ತು ಎಲ್ಲ ದೇವರುಗಳಿಗೆ ಹೂವಿನ ಅಲಂಕಾರವಿರುತ್ತದೆ. ಸಾವಂದಿಪುರ ಮತ್ತು ಸಾಮಂದಿಪುರ ಭಕ್ತಾದಿಗಳಿಂದ ಕೊಂಡದ ಸೌದೆ ಉತ್ಸವ ಇದ್ದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ.