xr:d:DAGCGnkapXQ:2,j:9094318074839898652,t:24041110 
ಜಿಲ್ಲೆ

ಶ್ರೀ ಸಣ್ಣಕ್ಕಿ ವೀರಭದ್ರೇಶ್ವರ ರಥೋತ್ಸವ ಅದ್ದೂರಿ

ರುದ್ರಪ್ಪ ವಾಲಿ

ಹೊಸಪೇಟೆ: ನಗರದ ಶ್ರೀ ಸಣ್ಣಕ್ಕಿ ವೀರಭದ್ರೇಶ್ವರ ಸ್ವಾಮಿ ರಥೋತ್ಸವ ಬುಧವಾರ ಸಂಜೆ ಅಪಾರ ಭಕ್ತರ ಸಮ್ಮುಖದಲ್ಲಿ ಶ್ರದ್ಧಾ-ಭಕ್ತಿಯಿಂದ ಜರುಗಿತು. ದೇಗುಲದಲ್ಲಿ ಬೆಳಗ್ಗೆಯಿಂದ ನಾನಾ ಧಾರ್ಮಿಕ ಕಾರ್ಯಕ್ರಮ ನಡೆದವು. ರಥೋತ್ಸವ ನಿಮಿತ್ತ ದೇಗುಲಕ್ಕೆ ನಾನಾ ಪುಷ್ಪಗಳಿಂದ ಅಲಂಕರಿಸಲಾಗಿತ್ತು.

ದೇಗುಲಕ್ಕೆ ಬೆಳಗ್ಗೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದು ಸ್ವಾಮಿಯ ದರ್ಶನ ಪಡೆದರು. ಸಂಜೆ ದೇಗುಲದ ಆವರಣದಿಂದ ಪೂರ್ವಾಭಿಮುಖವಾಗಿ ಆರಂಭಗೊಂಡ ರಥೋತ್ಸವ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ಮರಳಿ ದೇವಸ್ಥಾನದ ಆವರಣಕ್ಕೆ ಮರಳಿತು.

ರಥೋತ್ಸವದಲ್ಲಿ ಉತ್ಸವ ಮೂರ್ತಿಗಳನ್ನು ಇಟ್ಟು ಭಕ್ತರು ರಥವನ್ನು ಎಳೆದರು. ಹೂವುಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.