ನೆಲಮಂಗಲ: ನಗರದ ಮೇಗಲಪೇಟೆ ಕವಾಡಿಮಠದ ಶ್ರೀರುದ್ರೇಶ್ವರ ಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ಬೆಳಗ್ಗೆಯಿಂದಲೂ ಶ್ರೀರುದ್ರೇಶ್ವರ ಸ್ವಾಮಿಗೆ ರುದ್ರಾಭಿಷೇಕ, ವಿಶೇಷ ಪೂಜೆ ಹೋಮಗಳನ್ನು ನಡೆಸಲಾಯಿತು. ವೀರಗಾಸೆ, ನಂದಿಧ್ವಜ ಕುಣಿತ, ಜಾನಪದ ಕಲಾತಂಡಗಳ ಕಲಾವಿದರ ನೃತ್ಯ ನೆರೆದಿದ್ದವರನ್ನು ಆಕರ್ಷಿಸಿದವು. ಅರವಂಟಿಕೆಗಳಲ್ಲಿ ಪಾನಕ, ಮಜ್ಜಿಗೆ ಮತ್ತು ಕೋಸಂಬರಿ ವಿತರಿಸಲಾಯಿತು. ದೇವಾಲಯದ ಸಮಿತಿಯಿಂದ ಅನ್ನದಾಸೋಹ ನಡೆಯಿತು. ಶ್ರೀ ಸಿದ್ದರಾಮೇಶ್ವರ ಪ್ಲೋರ್ ಮಿಲ್ನ ಕೆ.ಎಸ್.ಶಿವಶಂಕರ್, ಶಾಸಕ ಎನ್.ಶ್ರೀನಿವಾಸ್, ನಗರಸಭೆ ಅಧ್ಯಕ್ಷ ಎನ್.ಗಣೇಶ್, ಉಪಾಧ್ಯಕ್ಷ ಆನಂದ್, ನಿಕಟಪೂರ್ವ ಅಧ್ಯೆ ಸದಸ್ಯೆ ಎನ್. ಎಸ್.ಪೂರ್ಣಿಮಾಸುಗ್ಗರಾಜು, ರುದ್ರೇಶ್ವರಸ್ವಾಮಿ ದೇವಾಲಯ ದತ್ತಿ ಸಮಿತಿ ಅಧ್ಯಕ್ಷ ಎನ್.ಆರ್.ಜಗದೀಶ್, ಗೌರವಾಧ್ಯಕ್ಷ ಎಸ್.ಎಸ್.ನಟರಾಜು, ಪ್ರಧಾನ ಕಾರ್ಯದರ್ಶಿ ಖಜಾಂಚಿ ದಯಾಶಂಕರ್, ಗೌರವಕಾರ್ಯದರ್ಶಿ ರುದ್ರಮೂರ್ತಿ, ಕಾರ್ಯದರ್ಶಿ ಬಾವಿಕೆರೆ ಗಂಗರಾಜು, ಸಹಕಾರ್ಯದರ್ಶಿ ಪುಟ್ಟಣ್ಣ, ಉಪಾಧ್ಯಕ್ಷ ರಾಜು, ಸದಸ್ಯ ಕೆ. ಎಸ್.ಶಿವಶಂಕರ್, ಶ್ರೀಕಂಠಮೂರ್ತಿ, ರೇಣುಕಾಪ್ರಸಾದ್, ಗಂಗಾಧರಪ್ಪ, ದೀಪಕ್, ಗಣೇಶ್, ಬಸವರಾಜು ಇದ್ದರು.