ಅರಕಲಗೂಡು ತಾಲೂಕಿನ ದಾಸನಪುರ-ಮಣಜೂರು ಬೆಟ್ಟದ ಶ್ರೀ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವ ಪ್ರಯುಕ್ತ ಶನಿವಾರ ದೇವಸ್ಥಾನದಲ್ಲಿ ಭಕ್ತರು ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು. 
ಜಿಲ್ಲೆ

ಶ್ರೀ ರಂಗನಾಥಸ್ವಾಮಿ ಜಾತ್ರೆ

ಲೋಕೇಶ್ ಮನು. ಡಿ

ಅರಕಲಗೂಡು: ತಾಲೂಕಿನ ದಾಸನಪುರ-ಮಣಜೂರು ಬೆಟ್ಟದ ಶ್ರೀ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವ ಶನಿವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.


ಹೇಮಾವತಿ ಜಲಾಶಯ ಹಿನ್ನೀರಿನ ಪರಿಸರದಲ್ಲಿರುವ ಬೆಟ್ಟದ ಮೇಲೆ ಜಾತ್ರೆಯ ಸಡಗರ ಮನೆ ಮಾಡಿತ್ತು. ಸುತ್ತಮುತ್ತಲಿನ ಹಳ್ಳಿಗಳ ಅಪಾರ ಗ್ರಾಮಸ್ಥರು ತಂಡೋಪತಂಡವಾಗಿ ಆಗಮಿಸಿ ಜಾತ್ರೆಯಲ್ಲಿ ಪಾಲ್ಗೊಂಡರು.


ಬೆಟ್ಟದ ಮೇಲಿನ ಮೂಲ ದೇವರ ಗುಡಿಯಲ್ಲಿ ಶ್ರೀ ರಂಗನಾಥಸ್ವಾಮಿ ದೇವರ ಮೂರ್ತಿಗೆ ವಿಶೇಷವಾಗಿ ಅಲಂಕರಿಸಲಾಗಿತ್ತು. ಭಕ್ತರು ಸರತಿಯಲ್ಲಿ ಆಗಮಿಸಿ ದೇವರ ದರ್ಶನ ಪಡೆದು ಪುನೀತರಾದರು.


ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಸಮಾಜ ಸೇವಕ ಎಂ.ಟಿ. ಕೃಷ್ಣೇಗೌಡ ಅಭಿಮಾನಿ ಬಳಗದಿಂದ ಭಕ್ತರಿಗೆ ಮಜ್ಜಿಗೆ ವಿತರಿಸಲಾಯಿತು. ಜಾತ್ರೆಯಲ್ಲಿ ಸಿಹಿ ತಿನಿಸುಗಳು, ಆಟಿಕೆಗಳ ವ್ಯಾಪಾರಿ ಭರಾಟೆ ಕಂಡುಬಂತು.

ಮುಖಂಡರಾದ ಎಂ.ಟಿ.ಕೃಷ್ಣೇಗೌಡ, ದಿವಾಕರಗೌಡ, ಎಂ.ಆರ್.ರಂಗಸ್ವಾಮಿ, ರಾಜೇಗೌಡ, ಎ.ಸಿ. ದೇವರಾಜೇಗೌಡ, ಪರಮೇಶ್ ಇತರರು ಇದ್ದರು.