ತಾವರಗೇರಾ ಸಮೀಪದ ಹುಲಿಯಾಪೂರ ಗ್ರಾಮಕ್ಕೆ ಬಂದ ಅಯೋಧ್ಯೆಯ ಮಂತ್ರಾಕ್ಷತೆ , ಆಹ್ವಾನ ಪತ್ರಿಕೆಯನ್ನು ವಿಜೃಂಭಣೆಯಿಂದ ಸ್ವಾಗತಿಸಲಾಯಿತು. ಬಸನಗೌಡ, ವೆಂಕನಗೌಡ, ಶರಣಬಸವ, ಮಲ್ಲಪ್ಪ, ವೀರೇಶ, ಚಂದ್ರು ಇದ್ದರು. 
ಜಿಲ್ಲೆ

ಶ್ರೀರಾಮನ ಮಂತ್ರಾಕ್ಷತೆಗೆ ಅದ್ದೂರಿ ಸ್ವಾಗತ

Kopala - Desk - Eraveni

ತಾವರಗೇರಾ: ಅಯೋಧ್ಯೆಯಿಂದ ಬಂದ ಶ್ರೀರಾಮನ ಮಂತ್ರಾಕ್ಷತೆ, ರಾಮ ಮಂದಿರ ಭಾವಚಿತ್ರ ಹಾಗೂ ಕರಪತ್ರಗಳನ್ನು ಹುಲಿಯಾಪುರ ಗ್ರಾಮದಲ್ಲಿ ಬುಧವಾರ ಭಜನೆ ಹಾಗೂ ಮಹಿಳೆಯರು ಕಳಸದೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿದರು.

ಕುಷ್ಟಗಿ ತಾಲೂಕು ವಿಶ್ವ ಹಿಂದೂ ಪರಿಷತ್‌ನ ಕಾರ್ಯವಾಹಕ ಬಸವನಗೌಡ ಪಾಟೀಲ್, ವೆಂಕನಗೌಡ ಮಾಲಿಪಾಟೀಲ್, ಬಸವರಾಜ ಮರಳಿ, ಶರಣಬಸವ ಮರಳಿ, ಬಸಣ್ಣ ಕುಂಬಾರ, ಮಲ್ಲಪ್ಪ ಗೆದಿಗೇರಿ, ಚಂದ್ರು ಯರದೊಡ್ಡಿ, ವೀರೇಶ್ ಪದಕಿ ಇತರರಿದ್ದರು.