ಶ್ರೀರಾಮ ಶಾಲೆಯಲ್ಲಿ ಲವ-ಕುಶ ನೂತನ ಕುಟೀರ ಹರೀಶ್ ಉದ್ಘಾಟಿಸಿದರು. ಡಾ.ಕಲ್ಲಡ್ಕ ಪ್ರಭಾಕರ ಭಟ್, ಬಿ.ಐತ್ತಪ್ಪ ನಾಯ್ಕ ಮೊದಲಾದವರಿದ್ದರು. 
ಜಿಲ್ಲೆ

ಅಪಾಯ ಎದುರಿಸಲು ಸ್ವರಕ್ಷಣೆ ಕಲೆ ಕರಗತ : ಡಾ.ಕಲ್ಲಡ್ಕ ಪ್ರಭಾಕರ ಭಟ್ ಕರೆ :

ಸೌಮ್ಯ ಆರ್

ಪ್ಪಿನಂಗಡಿ: ಸಾಂದರ್ಭಿಕ ಅಪಾಯಗಳನ್ನು ಎದುರಿಸಲು ಆತ್ಮರಕ್ಷಣೆ ಕಲೆಯನ್ನು ಮಹಿಳೆಯರು ಕರಗತ ಮಾಡಿಕೊಳ್ಳಬೇಕು ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.

ವೇದಶಂಕರ ನಗರದ ಶ್ರೀರಾಮ ಶಾಲೆಯಲ್ಲಿ ಇತ್ತೀಚೆಗೆ ಲವ-ಕುಶ ನೂತನ ಕುಟೀರ ಉದ್ಘಾಟನೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶ್ರೀಕ್ಷೇತ್ರ ಆರಿಕೋಡಿಯ ಧರ್ಮದರ್ಶಿ ಹರೀಶ್ ಕುಟೀರ ಉದ್ಘಾಟಿಸಿದರು. ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಶಿಕ್ಷಕ ಬಿ.ಐತ್ತಪ್ಪ ನಾಯ್ಕ, ಶಿಲ್ಪಿ ರಾಜೇಂದ್ರನ್, ಸ್ಥಳದಾನಿ ಗೋವಿಂದ ಭಟ್, ಆಡಳಿತ ಮಂಡಳಿ ಅಧ್ಯಕ್ಷ ಸುನೀಲ್ ಅಣಾವು, ಉಪಾಧ್ಯಕ್ಷ ಅನುರಾಧ ಆರ್.ಶೆಟ್ಟಿ, ಪಾಲಕರ ಸಂಘದ ಅಧ್ಯಕ್ಷ ಉದಯ ಅತ್ರಮಜಲು, ಪ್ರಾಥಮಿಕ ವಿಭಾಗ ಮುಖ್ಯಸ್ಥೆ ವಿಮಲ, ಕೋಶಾಧಿಕಾರಿ ಸುಧೀರ್ ಟಿ.ಎಸ್, ಸದಸ್ಯರಾದ ಜಯಂತ್ ಪೊರೋಳಿ, ಗುಣಕರ ಅಗ್ನಾಡಿ, ಗಣೇಶ್, ಗೀತಾಲಕ್ಷ್ಮೀ ತಾಳ್ತಜೆ, ಇಂದ್ರಪ್ರಸ್ಥ ವಿದ್ಯಾಲಯ ಅಧ್ಯಕ್ಷ ಕರುಣಾಕರ ಸುವರ್ಣ, ಸಂಚಾಲಕ ಸುಬ್ರಹ್ಮಣ್ಯ ಭಟ್, ಕೋಶಾಧಿಕಾರಿ ಸುರೇಶ್ ಜಿ, ಪ್ರಾಂಶುಪಾಲ ಎಚ್.ಕೆ.ಪ್ರಕಾಶ್, ಮುಖ್ಯಶಿಕ್ಷಕಿ ವೀಣಾ ಆರ್.ಪ್ರಸಾದ್, ನಿವೃತ್ತ ಸೇನಾಧಿಕಾರಿ ಚಂದಪ್ಪ ಮೂಲ್ಯ, ಗುತ್ತಿಗೆದಾರ ಪ್ರತಾಪ್ ಪೆರಿಯಡ್ಕ ಉಪಸ್ಥಿತರಿದ್ದರು.

ಶ್ರೀ ಮಾಧವ ಶಿಶುಮಂದಿರ ವತಿಯಿಂದ ಶಾಲೆಯ ಅನ್ನಬ್ರಹ್ಮ ಯೋಜನೆಗೆ ನೀಡಲಾದ 1 ಲಕ್ಷ ರೂ. ದೇಣಿಗೆಯನ್ನು ಸಮಿತಿ ಅಧ್ಯಕ್ಷ ಮನೋಜ್ ಶೆಟ್ಟಿ, ಪದಾಧಿಕಾರಿ ಕಂಗ್ವೆ ವಿಶ್ವನಾಥ್ ಶೆಟ್ಟಿ ಹಸ್ತಾಂತರಿಸಿದರು.

ಶಾಲಾ ಸಂಚಾಲಕ ಯು.ಜಿ.ರಾಧಾ ಸ್ವಾಗತಿಸಿದರು. ಶಿಕ್ಷಕಿ ವಿದ್ಯಾ, ಪವಿತ್ರಾ ಕಾರ್ಯಕ್ರಮ ನಿರೂಪಿಸಿದರು. ಪ್ರೌಢವಿಭಾಗದ ಮುಖ್ಯಸ್ಥ ರಘುರಾಮ ಭಟ್ ವಂದಿಸಿದರು.