ಜಿಲ್ಲೆ

ವಿವೇಕ ಬಾಲೋದ್ಯಾನ ಪಬ್ಲಿಕ್ ಸ್ಕೂಲ್‌ನಲ್ಲಿ ಶ್ರೀರಾಮ ಪೂಜೆ

ಮೈಸೂರು: ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ನಗರದ ವಿವೇಕ ಬಾಲೋದ್ಯಾನ ಪಬ್ಲಿಕ್ ಸ್ಕೂಲ್‌ನಲ್ಲಿ ಶ್ರೀರಾಮನ ಪೂಜೆ ಹಾಗೂ ಭಜನಾ ಕಾರ್ಯಕ್ರಮ ನೆರವೇರಿತು.

ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ವಾಸುದೇವರಾವ್ ಅರೂರ್, ಉಪಾಧ್ಯಕ್ಷ ಬಿ.ಎನ್.ಪ್ರಭಾಕರ್, ಕಾರ್ಯದರ್ಶಿ ಎಂ.ಎಸ್.ನಾಗೇಶ್, ಖಜಾಂಚಿ ಎಚ್.ಎಸ್.ಶಿವಶಂಕರ್, ಪ್ರಾಂಶುಪಾಲೆ ಪ್ರತಿಭಾ ಅಶೋಕ್ ಹಾಗೂ ಶಾಲೆಯ ಎಲ್ಲ ಬೋಧಕ, ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.

ವಿದ್ಯಾರ್ಥಿಗಳು ರಾಮನ ವೇಷಭೂಷಣ ತೊಟ್ಟು ಗಮನ ಸೆಳೆದರು. ಕನ್ನಡ ಶಿಕ್ಷಕ ಎಂ. ಮಂಜುನಾಥ್ ಹಾಗೂ ಇಂಗ್ಲಿಷ್ ಶಿಕ್ಷಕ ಸತ್ಯನಾರಾಯಣ್ ರಾಮಮಂದಿರ ನಿರ್ಮಾಣದ ಹೋರಾಟದ ಇತಿಹಾಸವನ್ನು ಕುರಿತು ಮಾತನಾಡಿದರು.