ಜಿಲ್ಲೆ

ಶ್ರೀರಾಮ ನವಮಿ ಉತ್ಸವ ನಾಳೆ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಪುರುಷೋತ್ತಮ ಸಭಾಭವನದಲ್ಲಿ ಏ. 6ರಂದು ಸಂಜೆ 5 ಗಂಟೆಗೆ ನಗರದ ಸಂಸ್ಕಾರ ಭಾರತಿ ವತಿಯಿಂದ ಶ್ರೀರಾಮನವಮಿ ಉತ್ಸವ ಏರ್ಪಡಿಸಲಾಗಿದೆ.

ಹಿಂದಿ ಪ್ರಚಾರ ಸಭಾ ಕಾರ್ಯಾಧ್ಯಕ್ಷ ಈರೇಶ ಅಂಚಟಗೇರಿ ಉದ್ಘಾಟಿಸುವರು. ಸಂಸ್ಕಾರ ಭಾರತಿ ಉತ್ತರ ಪ್ರಾಂತ ಪ್ರಧಾನ ಕಾರ್ಯದರ್ಶಿ ಡಾ. ಶಶಿಧರ ನರೇಂದ್ರ ರಾಮಾಯಣದ ಆದರ್ಶಗಳ ಕುರಿತು ವಿಶೇಷ ಉಪನ್ಯಾಸ ನೀಡುವರು. ಧಾರವಾಡ ಮಹಾನಗರ ಅಧ್ಯಕ್ಷೆ ಡಾ. ಸೌಭಾಗ್ಯ ಕುಲಕರ್ಣಿ ಅಧ್ಯಕ್ಷತೆ ವಹಿಸುವರು. ಸಂಸ್ಕಾರ ಭಾರತಿ ಉತ್ತರ ಪ್ರಾಂತ ಕಾರ್ಯದರ್ಶಿ ಮಾರುತಿ ಹುಟಗಿ, ಸಂಟನಾ ಕಾರ್ಯದರ್ಶಿ ಪ್ರಸಾದ ಮಡಿವಾಳರ ಉಪಸ್ಥಿತರಿರುವರು.

ವಿದುಷಿ ಭಾರ್ಗವಿ ಗುಡಿ ಕುಲಕರ್ಣಿ ಹಾಗೂ ಶಿಲ್ಪಾ ನವಲಿಮಠ ಭಕ್ತಿ ಸಂಗೀತ ಪ್ರಸ್ತುತಪಡಿಸುವರು. ಸಂವಾದಿನಿಯಲ್ಲಿ ಡಾ. ಪರಶುರಾಮ ಕಟ್ಟಿಸಂಗಾವಿ, ತಬಲಾದಲ್ಲಿ ವಿಜಯಕುಮಾರ ಸುತಾರ ಸಾಥ್​ ನೀಡುವರು. ವಿದುಷಿ ರೋಹಿಣಿ ಇಮಾರತಿ ನಿರ್ದೇಶನದಲ್ಲಿ ಗಣೇಶ ನೃತ್ಯ ಶಾಲೆ ವಿದ್ಯಾರ್ಥಿಗಳು ಶ್ರೀರಾಮನ ಹಾಡುಗಳಿಗೆ ವಿಶೇಷ ನೃತ್ಯ ಪ್ರಸ್ತುತ ಪಡಿಸಲಿದ್ದಾರೆ.

ರಂಗಭೂಮಿ, ಸಂಗೀತ ಹಾಗೂ ನೃತ್ಯ ಕ್ಷೇತ್ರದಲ್ಲಿ ಸಾಧನೆಗೈದ ವಿಷಯಾ ಜೇವೂರ, ವೀರಣ್ಣ ಪತ್ತಾರ, ಡಾ. ಶ್ರೀಧರ ಕುಲಕರ್ಣಿ ಹಾಗೂ ಆರತಿ ದೇವಶಿಖಾಮಣಿ ಅವರಿಗೆ ಸನ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.