ಹುಬ್ಬಳ್ಳಿ : ಅಖಿಲ ಕರ್ನಾಟಕ ಶಿಕ್ಕಲಗಾರ ಸಮಾಜದ ಗುರುಪೀಠದ ಪೀಠಾಧಿಪತಿಯಾಗಿ ಆಚಾರ್ಯ ಶ್ರೀ ರಾಘವೇಂದ್ರ ಗುರೂಜಿ ಆಯ್ಕೆಗೊಂಡಿದ್ದಾರೆ.
ಶ್ರೀ ಸಿದ್ಧಾರೂಢ ಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಹುಬ್ಬಳ್ಳಿಯ ಶಿಕ್ಕಲಗಾರ ಸಮಾಜದ ಪ್ರಮುಖರ ಸಭೆಯಲ್ಲಿ ಸಮಾಜದ ಗುರುಪೀಠದ ಸ್ಥಾಪನೆಯ ಬಗ್ಗೆ ರ್ಚಚಿಸಿದ ಸಂದರ್ಭದಲ್ಲಿ ಆಚಾರ್ಯ ಶ್ರೀ ರಾಘವೇಂದ್ರ ಗುರೂಜಿ ಅವರನ್ನು ಒಮ್ಮತದಿಂದ ಆಯ್ಕೆ ಮಾಡಲಾಯಿತು.
ಧರ್ಮರಾಜ ಪೂಜಾರ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಕರ್ನಾಟಕ ಶಿಕ್ಕಲಗಾರ ಸಮಾಜದ ಅಧ್ಯಕ್ಷ ದಶರಥ ವಾಲಿ ಹಾಗೂ ಪ್ರಮುಖರು ಮಾತನಾಡಿದರು. ಕೆಲವೇ ದಿನಗಳಲ್ಲಿ ರಾಜ್ಯಾದ್ಯಂತ ಎಲ್ಲ ಜಿಲ್ಲೆ, ತಾಲೂಕು, ನಗರಗಳಲ್ಲಿರುವ ಶಿಕ್ಕಲಗಾರ ಸಮಾಜದ ಪ್ರಮುಖರ ಸಭೆ ಕರೆದು ಅಭಿಪ್ರಾಯ ಪಡೆಯಲಾಗುವುದು ಎಂದು ದಶರಥ ವಾಲಿ ತಿಳಿಸಿದ್ದಾರೆ.