ಮಾನ್ವಿಯ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಠದ ಜಗನ್ನಾಥದಾಸರ ಸನ್ನಿಧಿಯಲ್ಲಿ ಗುರುವಾರ ದಾಸ ಶ್ರೇಷ್ಠ ಪುರಂದರ ದಾಸರ ಉತ್ತರಾರಾಧಾನೆ ಅಂಗವಾಗಿ ರಥೋತ್ಸವ ಜರುಗಿತು. 
ಜಿಲ್ಲೆ

ಶ್ರೀ ಪುರಂದರ ದಾಸರ ಉತ್ತರಾರಾಧಾನೆ ಸಂಪನ್ನ

ಮಾನ್ವಿ: ಪಟ್ಟಣದ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಠದ ಜಗನ್ನಾಥ ದಾಸರ ಸನ್ನಿಧಿಯಲ್ಲಿ ಗುರುವಾರ ದಾಸ ಶ್ರೇಷ್ಠ ಪುರಂದರ ದಾಸರ ಉತ್ತರಾರಾಧಾನೆ ಕಾರ್ಯಕ್ರಮ ಜರುಗಿತು.

ಬೆಳಗ್ಗೆಯಿಂದ ಹರಿಕಥಾಮೃತಸಾರ ಪಾರಾಯಣ, ಪಂಚಾಮೃತ ಅಭಿಷೇಕ, ಪುರಂದರ ದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಬಳಿಕ ಪವಮಾನ ಭಜನಾ ಮಂಡಳಿ, ದಾಸಾರ್ಯ ಮಹಿಳಾ ಭಜನಾ ಮಂಡಳಿ ಅವರ ಭಜನೆಯೊಂದಿಗೆ ಸಂಭ್ರಮದಿಂದ ರಥೋತ್ಸವ ನೆರವೇರಿಸಲಾಯಿತು. ವಿಜಯಪುರದ ಮಾಳವಿಕಾ ಜೋಷಿ ಅವರು ದಾಸವಾಣಿ ಕಾರ್ಯಕ್ರಮ ನಡೆಸಿಕೊಟ್ಟರು.

ಬ್ರಾಹ್ಮಣ ಸಮಾಜದ ತಾಲೂಕು ಅಧ್ಯಕ್ಷ ಮುದ್ದುರಂಗರಾವ್ ಮುತಾಲಿಕ್, ಪ್ರಮುಖರಾದ ಟಿ.ಭೀಮಸೇನರಾವ್ ಹರನಹಳ್ಳಿ, ವೆಂಕೋಬರಾವ್, ನರಸಿಂಹಜೋಷಿ, ವಿಜಯೀಂದ್ರಾಚಾರ್ಯ ಇ., ಪ್ರಲ್ಹಾದ ಕುರ್ಡಿ, ವಿಜಯರಾವ್, ನಾರಾಯಣಾಚಾರ್ಯ ಅಪೂಟ, ಪವನ ಕುಲಕರ್ಣಿ ಇತರರಿದ್ದರು.