ವಿಜಯವಾಣಿ ಸುದ್ದಿಜಾಲ ಧಾರವಾಡ
ಶ್ರಾವಣ ಮಾಸದ ಅಂಗವಾಗಿ ಶ್ರೀ ಮದಥಣಿ ಮುರುಘೇಂದ್ರ ಮಹಾಶಿವಯೋಗಿಗಳ ಜೀವನ ಮತ್ತು ಸಾಹಿತ್ಯ ಪ್ರವಚನ ಹಾಗೂ ಗ್ರಂಥ ಬಿಡುಗಡೆ ಮತ್ತು ವಿಶೇಷ ಉಪನ್ಯಾಸ, ವಚನ ಗಾಯನ ಕಾರ್ಯಕ್ರಮವನ್ನು ಆ. 5ರಿಂದ ಸೆ. 3ರವರೆಗೆ ಶ್ರೀ ಮುರುಘಾಮಠದಲ್ಲಿ ಏರ್ಪಡಿಸಲಾಗಿದೆ.
ಬಟಕುರ್ಕಿ ಚೌಕೇಶ್ವÀರಮಠದ ಶ್ರೀ ಗದಗಯ್ಯ ದೇವರು ನಿತ್ಯ ಸಂಜೆ 7ರಿಂದ 8ರವರೆಗೆ ಪ್ರವಚನ ನೀಡುವರು. 5ರಂದು ಸಂಜೆ 7ಕ್ಕೆ ಪ್ರವಚನ ಸಮಾರಂಭವನ್ನು ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾAತ ಬೆಲ್ಲದ ಉದ್ಘಾಟಿಸಸುವರು. ಚಿತ್ತರಗಿ ಶ್ರೀ ವಿಜಯಮಹಾಂತೇಶ್ವರ ಶಾಖಾ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಪತ್ರಿವನ ಮಠದ ಡಾ. ಗುರುಸಿದ್ಧವೀರ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸುವರು. ವೈಶುದೀಪ ಫೌಂಡೇಶನ್ ಅಧ್ಯಕ್ಷೆ ಶಿವಲೀಲಾ ಕುಲಕರ್ಣಿ ಅಧ್ಯಕ್ಷತೆ ವಹಿಸುವರು. ಶಾಸಕರಾದ ಎನ್.ಎಚ್. ಕೋನರಡ್ಡಿ, ಮಹೇಶ ಟೆಂಗಿನಕಾಯಿ ಅತಿಥಿಯಾಗಿ ಪಾಳ್ಗೊಳ್ಳುವರು. ಡಾ. ಸಮರ್ಥ ಮಹೇಶ ಪ್ರಸಾದ ಅವರನ್ನು ಸನ್ಮಾನಿಸಲಾಗುವುದು. ಸದಾಶಿವ ಐಹೋಳೆ ವಚನ ಸಂಗೀತ ನಡೆಸಿಕೊಡುವರು.
ಸೆ. 3ರ ಬೆಳಗ್ಗೆ 10ಕ್ಕೆ ಶ್ರೀ ಮದಥಣಿ ಮುರುಘೇಂದ್ರ ಮಹಾಶಿವಯೋಗಿಗಳ ಜೀವನ ದರ್ಶನ ಹಾಗೂ ವಚನ ಪಲ್ಲಕ್ಕಿ ಉತ್ಸವ ಕಾರ್ಯಕ್ರಮ ಜರುಗಲಿದೆ. ಸಂಜೆ 6ಕ್ಕೆ ಶ್ರಾವಣ ಮಾಸದ ಪ್ರವಚನ ಸಮಾರೋಪ ಸಮಾರಂಭ ಜರುಗುವುದು. ರಆಜಗುರು ಸಂಸ್ಥಾನ ಮಠದ ಶ್ರೀ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ದೊರೆಸ್ವಾಮಿ ವಿರಕ್ತಮಠದ ಶ್ರೀ ಶಾಂತಲಿAಗ ಸ್ವಾಮೀಜಿ ಸಮ್ಮುಖ ವಹಿಸುವರು. ಇದೇವೇಳೆ `ಚನ್ನಬಸವಣ್ಣನವರ ಕರಣ ಹಸಿಗೆ ವ್ಯಾಖ್ಯಾನ' ಸಂಪುಟ ಗ್ರಂಥ ಲೋಕಾರ್ಪಣೆ ಜರುಗಲಿದೆ. ಹಿರಿಯ ಸಾಹಿತಿ ಡಾ. ವೀರಣ್ಣ ರಾಜೂರ ಗ್ರಂಥ ಕುರಿತು ಮಾತನಾಡುವರು. ಶಾಸಕ ಅರವಿಂದ ಬೆಲ್ಲದ ಹಾಗೂ ಮಾಜಿ ಶಾಸಕಿ ಸೀಮಾ ಮಸೂತಿ ಅತಿಥಿಯಾಗಿ ಪಾಲ್ಗೊಳ್ಳುವರು. ಸಂಗೀತ ಕಲಾವಿದ ತೋಟಪ್ಪ ಉತ್ತಂಗಿ ವಚನ ಸಂಗೀತ ನಡೆಸಿಕೊಡುವರು ಎಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.