ಸಿದ್ದಾಪುರ: ಅಭ್ಯತ್ ಮಂಗಲ ಶ್ರೀ ಮೂಕಾಂಬಿಕಾ, ನಾಗರಾಜ, ಗುಳಿಗರಾಜ ದೇವಾಲಯದ ವಾರ್ಷಿಕ ಮಹೋತ್ಸವವು ಜೂ.15ರಂದು ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ. ಅಂದು ಬೆಳಗ್ಗೆ 7 ಗಂಟೆಗೆ ಗಣಪತಿ ಹೋಮ, 9 ಗಂಟೆಗೆ ಕಲಶಾಭಿಷೇಕ, 12.30ಕ್ಕೆ ಮಹಾಪೂಜೆ ನಂತರ ಅನ್ನಸಂತರ್ಪಣೆ ನಡೆಯಲಿದೆ. ನಾಗಾ ಕಲಶಾಭಿಷೇಕ ನಡೆಸುವ ಭಕ್ತರು, ಏಳನೀರು ಹಾಗೂ ಹಾಲನ್ನು ತಾವೇ ತರುವಂತೆ ದೇವಸ್ಥಾನದ ಆಡಳಿತ ಮಂಡಳಿ ಕೋರಿದೆ.