ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಹೊಸ ಎಪಿಎಂಸಿಯ ಮಟ್ಟಿ ಪ್ಲಾಟ್‌ನಲ್ಲಿ ಶ್ರೀ ಮಾತೆ ಕರಿಯಮ್ಮದೇವಿ ಜಾತ್ರಾ ಮಹೋತ್ಸವ ಪ್ರಯುಕ್ತ ದೇವಸ್ಥಾನದ ನೂತನ ಗೋಪುರದ ಕಳಸಾರೋಹಣ ಹಾಗೂ ನಾಗದೇವತೆಯ ಮೂರ್ತಿ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಭಾನುವಾರ ಜರುಗಿತು.
ದೇವಿಗೆ ವಿಶೇಷ ಪೂಜೆ ಹಾಗೂ ಉಡಿ ತುಂಬುವ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಹಿಳೆಯರು ದೇವಿಗೆ ಉಡಿ ತುಂಬಿ ಇಷ್ಟಾರ್ಥ ಈಡೇರಿಕೆಗಾಗಿ ಪ್ರಾರ್ಥಿಸಿದರು. ಗೋಪುರದ ಕಳಸ ಹಾಗೂ ನಾಗದೇವತೆ ಮೂರ್ತಿಯನ್ನು ಸುಮಂಗಲೆಯರ ಕುಂಭ ಮೆರವಣಿಗೆಯೊಂದಿಗೆ ಕರೆ ತರಲಾ¬ತು. ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮೀಜಿ ಕಳಸಾರೋಹಣ ನೆರವೇರಿಸಿದರು. ನಂತರ ನಾಗದೇವತೆಯ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಾ¬ತು.
ಕೆಎಂಎಫ್ ನಿರ್ದೇಶಕಿ ಶಿವಲೀಲಾ ಕುಲಕರ್ಣಿ, ಎಸ್.ಸಿ. ಮಡಿವಾಳರ, ಜಿ.ಎಲ್, ಭೋಸ್ಲೆ, ಜ್ಯೋತಿಬಾ ಸಾಮಾಯಿ, ಮಡಿವಾಳಪ್ಪ ಹೂಲಿ, ಭೀಮನಗೌಡ ಮುದಕಣ್ಣವರ, ಎಂ.ಬಿ. ನದಾಫ್, ಸುಭಾಷ ವಾಲಿ, ಷಣ್ಮುಖ ಕಮತಿ, ದೇವಪ್ಪ ಬಂಗಾರಿ, ನೇಹಾ ಬುದ್ನಿ, ವಿಜಯಲಕ್ಷ್ಮೀ, ಸರೋಜಾ, ಲಕ್ಷ್ಮೀ, ಇತರರಿದ್ದರು.