ಸೋಮವಾರಪೇಟೆ ತಾಲೂಕಿನ ಹಿರಿಕರ ಗ್ರಾಮದ ಶ್ರೀ ಮಲ್ಲೇಶ್ವರ ದೇವಾಲಯದ ವಾರ್ಷಿಕ ಪೂಜೆಯಲ್ಲಿ ಉತ್ಸವ ಮೂರ್ತಿಯನ್ನು ಗ್ರಾಮದ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. 
ಜಿಲ್ಲೆ

ಶ್ರೀ ಮಲ್ಲೇಶ್ವರ ದೇವಾಲಯ ವಾರ್ಷಿಕ ಪೂಜೆ

ಲೋಕೇಶ್ ಮನು. ಡಿ

ಸೋಮವಾರಪೇಟೆ: ತಾಲೂಕಿನ ಹಿರಿಕರ ಗ್ರಾಮದ ಶ್ರೀ ಮಲ್ಲೇಶ್ವರ ದೇವಾಲಯ ವಾರ್ಷಿಕ ಪೂಜೆ ವಿಜೃಂಭಣೆಯಿಂದ ನೆರವೇರಿತು.

ಸೋಮವಾರ ರಾತ್ರಿ ಗ್ರಾಮದ ಮಹಿಳೆಯರು ಕಳಶದೊಂದಿಗೆ ದೇವಾಲಯದವರಗೆ ಮೆರವಣಿಗೆಯಲ್ಲಿ ತೆರಳಿ ದೇವಾಲಯದ ಸುತ್ತ ಪ್ರದಕ್ಷಣೆ ನಡೆಸಿ ಪೂಜೆ ಸಲ್ಲಿಸಿದರು. ನಂತರ ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿತ್ತು. ಮಂಗಳವಾರ ಬೆಳಗ್ಗೆ ಕೊಲ್ಲಿಗದ್ದೆಯಲ್ಲಿ ಗಂಗೆ ಪೂಜಿಸಿ, ದೇವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ, ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಮನೆಗಳ ಮುಂಭಾಗ ಮನೆಯವರು ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ, ಕುಟಂಬದ ಸಮೃದ್ಧಿಗಾಗಿ ಪ್ರಾರ್ಥಿಸಿದರು. ನಂತರ ದೇವಾಲಯದಲ್ಲಿ ವಿವಿಧ ಪೂಜೆ-ಪುನಸ್ಕಾರ ನಡೆಯಿತು.

ಧಾರ್ಮಿಕ ಪದ್ಧತಿಯಂತೆ ಕೆಲವರು ಬೆಂಕಿ ಕೊಂಡ ಹಾಯ್ದರು. ಗ್ರಾಮಸ್ಥರು ಮಳೆ-ಬೆಳೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಹಿರಿಕರ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ.ಎನ್.ವಸಂತ್ ಕುಮಾರ್, ಉಪಾಧ್ಯಕ್ಷ ಎಚ್.ಈ.ರಮೇಶ್, ಕಾರ್ಯದರ್ಶಿ ಎಚ್.ಈ.ದಿನೇಶ್, ಖಜಾಂಚಿ ಜಿ.ಕೆ.ವಿಜಯ್, ಗೌರವಾಧ್ಯಕ್ಷ ಎಚ್.ಡಿ.ಸುಬ್ರಮಣಿ, ಪದಾಧಿಕಾರಿಗಳಾದ ಎಚ್.ಎನ್.ಶಿವರಾಜ್, ಎಚ್.ಕೆ. ಅಜಿತ್, ಎಚ್.ಆರ್.ದರ್ಶನ್ ಇದ್ದರು.