ಜಿಲ್ಲೆ

ಶ್ರೀಮಹಾಯೋಗಿ ವೇಮನ ಜಯಂತ್ಯುತ್ಸವ ಶುಕ್ರವಾರ

ನರಗುಂದ: ನರಗುಂದ ತಾಲೂಕು ರಡ್ಡಿ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಶ್ರೀಮಹಾಯೋಗಿ ವೇಮನರ 612ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಪಟ್ಟಣದ ನೀರಾವರಿ ಕಾಲನಿಯ ಶ್ರೀಗಜಾನನ ದೇವಸ್ಥಾನದಲ್ಲಿ ಜ.19ರಂದು ಬೆಳಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ. ಪುಣ್ಯಾರಣ್ಯ ಪತ್ರಿವನಮಠದ ಗುರುಸಿದ್ಧವೀರ ಶಿವಯೋಗಿ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ಮಾಜಿ ಸಚಿವ ಬಿ.ಆರ್. ಯಾವಗಲ್ ಅಧ್ಯಕ್ಷತೆ ವಹಿಸುವರು. ಶಾಸಕ ಸಿ.ಸಿ. ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ವಾಸನದ ನಿಸರ್ಗ ಚಿಕಿತ್ಸಕ ಡಾ. ಹನುಮಂತ ಮಳಲಿ, ವಕೀಲ ಶ್ರೀನಿವಾಸರಡ್ಡಿ ವೆಂಕರಡ್ಡಿ, ರಡ್ಡಿ ಸಮಾಜದ ನರಗುಂದ ತಾಲೂಕಾಧ್ಯಕ್ಷ ಬಿ.ಆರ್. ಪಾಟೀಲ, ಉಪಾಧ್ಯಕ್ಷ ಎಸ್.ಎಸ್. ಮಲ್ಲನಗೌಡ್ರ ಪಾಲ್ಗೊಳ್ಳುವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಅರವಿಂದ ಕರಬಸನಗೌಡ್ರ ಉಪನ್ಯಾಸ ನೀಡುವರು ಎಂದು ಪ್ರಕಟಣೆ ತಿಳಿಸಿದೆ.