ದೊಡ್ಡನಹುಂಡಿಯಲ್ಲಿ ಶ್ರೀ ಮಹದೇಶ್ವರಸ್ವಾಮಿ ಹಾಲರವಿ ಉತ್ಸವ 
ಜಿಲ್ಲೆ

ದೊಡ್ಡನಹುಂಡಿಯಲ್ಲಿ ಶ್ರೀ ಮಹದೇಶ್ವರಸ್ವಾಮಿ ಹಾಲರವಿ ಉತ್ಸವ

ತಿ.ನರಸೀಪುರ: ತಾಲೂಕಿನ ದೊಡ್ಡನಹುಂಡಿ ಗ್ರಾಮದ ಶ್ರೀ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ಮಂಗಳವಾರ ದೀಪಾವಳಿ ಅಮಾವಾಸ್ಯೆ ಪೂಜೆ, ಹಾಲರವಿ ಮೆರವಣಿಗೆ ವಿಜೃಂಭಣೆಯಿಂದ ನೆರವೇರಿತು.

ಹಬ್ಬದ ಹಿನ್ನೆಲೆಯಲ್ಲಿ ಶ್ರೀ ಮಹದೇಶ್ವರ ದೇವಸ್ಥಾನವನ್ನು ತಳಿರು ತೋರಣ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಗ್ರಾಮದ ಶ್ರೀ ಮಹದೇಶ್ವರ ದೇಗುಲದಲ್ಲಿ ಬೆಳಗ್ಗೆಯಿಂದಲೇ ವಿವಿಧ ಅಭಿಷೇಕ ಹಾಗೂ ಪೂಜೆ ನೆರವೇರಿದವು. ಬೆಳಗ್ಗೆ 10.30ಕ್ಕೆ ಗ್ರಾಮದ ಮಧ್ಯದಲ್ಲಿರುವ ಬಾವಿಯಲ್ಲಿ ಗಂಗಾಪೂಜೆ ನೆರವೇರಿಸಿ ನಂತರ ಮಂಗಳವಾದ್ಯ, ಸುಮಂಗಲಿಯರ ಕಳಸ ಕನ್ನಡಿ ಹಾಗೂ ವೀರಗಾಸೆ ಕುಣಿತದೊಂದಿಗೆ ಮೆರವಣಿಗೆ ದೇಗುಲಕ್ಕೆ ಆಗಮಿಸಿ ದೇವರಿಗೆ ಅಭಿಷೇಕ, ವಿಶೇಷ ಪೂಜೆ ಸಲ್ಲಿಸಲಾಯಿತು.

ಮೆರವಣಿಗೆಯಲ್ಲಿ ಮಹದೇಶ್ವರ ದೇಗುಲದ ಅರ್ಚಕ ಪ್ರಭುಸ್ವಾಮಿ, ಕುಂತೂರು ವೀರ ಸಿಂಹಾಸನ ಪೀಠಾಧ್ಯಕ್ಷ ಶ್ರೀ ಶಿವಪ್ರಭು ಸ್ವಾಮೀಜಿ, ತೇರಂಬಳ್ಳಿ ಮಠದ ಶ್ರೀ ಲಿಂಗರಾಜ ಸ್ವಾಮೀಜಿ, ನಾಡಗೌಡರಾದ ಜಿ.ಸ್ವಾಮಿ, ಗ್ರಾಮದ ಮುಖಂಡರಾದ ಬಸವರಾಜು, ಯಜಮಾನ್ ಬಸವರಾಜು, ಡಿ.ಬಿ.ನಂದೀಶ್ ಪ್ರಸಾದ್, ಅಭಿಷೇಕ್, ಮಹಾನಿರಂಜನ್, ರಾಜೇಶ್, ಪುಟ್ಟಸ್ವಾಮಿ, ಅಂಗಡಿ ನಾಗಣ್ಣ, ರಾಜೇಶ್, ಮರಿಸ್ವಾಮಿ, ಮಹದೇವಸ್ವಾಮಿ, ಡಿ.ಜಿ. ನಾಗೇಂದ್ರ, ಬಸವಣ್ಣ, ಸುತ್ತಮುತ್ತಲ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಏರ್ಪಡಿಸಲಾಗಿತ್ತು.