ಜಿಲ್ಲೆ

ಶ್ರೀ ಮಾಧವಾನಂದ ಭಾರತೀ ಶ್ರೀ ಚಾತುರ್ಮಾಸ್ಯ ವ್ರತ ಜು. 3ರಿಂದ

ಸಿದ್ದಾಪುರ: ತಾಲೂಕಿನ ಶ್ರೀ ಮನ್ನೆಲೆಮಾವಿನ ಮಠದ ಪೀಠಾಧೀಶರಾದ ಶ್ರೀ ಮಾಧವಾನಂದ ಭಾರತೀ ಸ್ವಾಮೀಜಿ ಅವರ ಪ್ರಥಮ ಚಾತುರ್ಮಾಸ್ಯ ವ್ರತವು ಶ್ರೀ ಮನ್ನಲೆಮಾವಿನ ಮಠದಲ್ಲಿ ಜುಲೈ 3ರಿಂದ ಸೆ.28ರವರೆಗೆ ಜರುಗಲಿದೆ.

ಜುಲೈ 3 ಗುರುಪೂರ್ಣಿಮೆಯಂದು ವ್ಯಾಸಪೂಜೆಯೊಂದಿಗೆ ಚಾತುರ್ಮಾಸ್ಯ ವ್ರತ ಆರಂಭವಾಗುತ್ತದೆ. ಅಂದು ಸಮಸ್ತ ಶಿಷ್ಯರ ಪರವಾಗಿ ಪಾದಪೂಜೆ ಮತ್ತು ಭಿಕ್ಷಾವಂದನೆ ನೆರವೇರಲಿದೆ. ಎಲ್ಲ ಶಿಷ್ಯರು ಹಾಗೂ ಭಕ್ತರು ಅಂದು ಶ್ರೀಮಠಕ್ಕೆ ಆಗಮಿಸಿ ಶ್ರೀಗಳ ದರ್ಶನ ಪಡೆದು ಪಾದಪೂಜೆ ಹಾಗೂ ಭಿಕ್ಷಾವಂದನೆ ಸೇವೆಯಲ್ಲಿ ಪಾಲ್ಗೊಳ್ಳುವಂತೆ ಮಠದ ಪ್ರಕಟಣೆ ತಿಳಿಸಿದೆ.