ಕಂಪ್ಲಿ ಕೋಟೆಯ ತುಂಗಭದ್ರಾ ನದಿ ತಟದಲ್ಲಿನ ಶ್ರೀಮಾಧವತೀರ್ಥರ ಮಧ್ಯಾರಾಧನೆ ನಿಮಿತ್ತ ಅಲಂಕೃತಗೊಂಡ ಮಾಧವತೀರ್ಥರ ಬೃಂದಾವನ. 
ಜಿಲ್ಲೆ

ಶ್ರೀಮಾಧವತೀರ್ಥರ ಮಧ್ಯಾರಾಧನೆ

ಕಂಪ್ಲಿ: ಇಲ್ಲಿನ ಕೋಟೆಯ ತುಂಗಭದ್ರಾ ನದಿ ತಟದಲ್ಲಿ, ಮಂತ್ರಾಲಯ ಮಠದ ಪರಂಪರೆಯ ಯತಿಗಳಾದ ಶ್ರೀಮಾಧವತೀರ್ಥರ ಮಧ್ಯಾರಾಧನಾ ಸಮಾರಂಭ ಶನಿವಾರ ಶ್ರದ್ಧಾಭಕ್ತಿಯಿಂದ ಜರುಗಿತು.

ಬೆಂಗಳೂರಿನ ರಾಯರಮಠದ ಪಂಡಿತ್ ಶ್ರೀನಿಧಿ ಆಚಾರ್ ಮಾತನಾಡಿ, ಮಾಧವತೀರ್ಥರು 13ನೇ ಶತಮಾನದ ಮಧ್ವಾಚಾರ್ಯರ ನೇರ ಶಿಷ್ಯರಾಗಿದ್ದರು. ನಾಲ್ಕು ವೇದಗಳನ್ನು ಅಧ್ಯಯನದಿಂದ ಕರಗತ ಮಾಡಿಕೊಂಡಿದ್ದರು. ಮಾಧವತೀರ್ಥರ ಸಂಕಲ್ಪ ಶಕ್ತಿಯಿಂದಾಗಿ ಜಗತ್ತಿನಲ್ಲಿಯೇ ವೈಭವಯುತವಾದ ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣವಾಯಿತು ಎಂದರು.

ಮಂತ್ರಾಲಯದ ಸಂಸ್ಕೃತ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಮಾಧವತೀರ್ಥರ ಜೀವನ ಚರಿತ್ರೆ, ತತ್ವ ಉಪದೇಶ, ಸಂದೇಶಗಳ ಕುರಿತು ಪ್ರಸ್ತುತಪಡಿಸಿದರು.ಮೂಲ ಬೃಂದಾವನವನ್ನು ಫಲಪುಷ್ಪ, ತುಳಸಿಮಾಲೆ, ತಳಿರುತೋಣಗಳಿಂದ ಅಲಂಕರಿಸಲಾಗಿತ್ತು. ಕಂಪ್ಲಿಯ ರಾಘವೇಂದ್ರಸ್ವಾಮಿ ಮಠದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಗುರುರಾಜ ಸೇವಾಮಂಡಳಿಯ ಪ್ರಮುಖ ಡಿ.ಗುರುರಾಜಾಚಾರ್, ಸದ್ಭಕ್ತರಾದ ಗಂಗಾವತಿಯ ಹನುಮಂತಾಚಾರ್ ವಕೀಲರು, ಎ.ನಾಗರಾಜಾಚಾರ್, ಕೆ.ಅನಂತಪದ್ಮನಾಭ, ಅನಂತರಾವ್ ಜೋಷಿ, ಡಾ.ಧೀರೇಂದ್ರ ವೈದ್ಯರು, ಡಿ.ವೇಣುಗೋಪಾಲಾಚಾರ್, ರಾಘವೇಂದ್ರಸ್ವಾಮಿ ಕಂಪ್ಲಿ ಶಾಖಾಮಠದ ವಿಚಾರಣಾಕರ್ತ ಟಿ.ಕೊಟ್ರೇಶ್, ಕಂಪ್ಲಿ, ಕೋಟೆ ಸೇರಿ ತಾಲೂಕಿನಾದ್ಯಂತ ಆಗಮಿಸಿದ ಸರ್ವಧರ್ಮಗಳ ರಾಯರ ಸದ್ಭಕ್ತರು ಪಾಲ್ಗೊಂಡಿದ್ದರು.