ಜಿಲ್ಲೆ

ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಲಕ್ಷದಿಪೋತ್ಸವ ಸಂಪನ್ನ

ದೇವರ ದರ್ಶನದಿಂದ ನೆಮ್ಮದಿ ಪ್ರಾಪ್ತಿ

ಶ್ರೀನಿವಾಸಪುರ: ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ಮಾಜಿ ಸ್ಪೀಕರ್​ ಕೆ.ಆರ್​. ರಮೇಶ್​ಕುಮಾರ್​ ತಿಳಿಸಿದರು.

ಪಟ್ಟಣದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದಲ್ಲಿ ದೇಗುಲ ಸಮಿತಿ, ಭಕ್ತಮಂಡಲಿಯಿಂದ ಶನಿವಾರ ಹಮ್ಮಿಕೊಂಡಿದ್ದ ಲಕ್ಷ್ಮೀನರಸಿಂಹ ಸ್ವಾಮಿಯ ಲಕ್ಷ ದೀಪೋತ್ಸವ ಮತ್ತು ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿ,

ಕಾರ್ತಿಕ ಮಾಸ ಹಬ್ಬಗಳ ಪರ್ವವಷ್ಟೇ ಅಲ್ಲ, ಜ್ಯೋತಿ ಬೆಳಗುವ ಮೂಲಕ, ಮನದಲ್ಲಿರುವ ಅಂಧಕಾರ ದೂರ ಮಾಡುವ ಪರ್ವವೂ ಆಗಿದೆ. ಅದರ ಸಂಕೇತವಾಗಿ ಮನೆಯ ಮುಂದೆ ದೀಪ ಬೆಳಗುತ್ತಾರೆ. ಕಾರ್ತಿಕ ಮಾಸದಲ್ಲಿ ವಿಶೇಷವಾಗಿ ಕೆಲವರು ಪವಿತ್ರ ನದಿ ತೀರಗಳಲ್ಲಿ ಪುಣ್ಯಸ್ನಾನ ಮಾಡುತ್ತಾರೆ. ಪವಿತ್ರ ಸ್ನಾನದಿಂದ ದೇಹ ಹಾಗೂ ಮನಸ್ಸು ಶುದ್ಧವಾಗುತ್ತದೆ. ಶಿವ ಮತ್ತು ವಿಷ್ಣು ಮಂದಿರಗಳಲ್ಲಿ ಸೂಯೋರ್ದಯಕ್ಕೆ ಮುನ್ನ ಮತ್ತು ಸೂಯೋರ್ದಯ ನಂತರ ಭಗವಂತನ ಪ್ರೀತ್ಯರ್ಥವಾಗಿ ಜ್ಯೋತಿ ಬೆಳಗುತ್ತಾರೆ ಎಂದರು.

ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿ, ತಾಲೂಕಿನಲ್ಲಿ ಸಮೃದ್ಧಿ ಮಳೆಯಾಗಲಿದೆ, ರೈತರಿಗೆ ಹಾಗೂ ನಾಗರಿಕರಿಗೆ ಒಳ್ಳೇಯದಾಗಲಿ ಎಂಬ ಆಶಯದೊಂದಿಗೆ, ಶಿಥಿಲವಾಗಿರುವ ದೇವಾಲಯಗಳನ್ನು ಸರಿಪಡಿಸಲು ಸಹಕಾರ ನೀಡಲು ಸಿದ್ಧರಾಗಿದ್ದೇವೆ. ಶಾಸಕರ ಅನುದಾನದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ದೇವಸ್ಥಾನದ ಜೀಣೋರ್ದ್ದಾರ ಮಾಡುವುದರೊಂದಿಗೆ, ಸರ್ವತೋಮುಖ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡಲು ಯತ್ನಿಸುತ್ತೇನೆ. ಅನುದಾನ ಬಂದ ತಕ್ಷಣವೇ ದೇವಾಲಯಗಳ ಸರ್ವತೋಮುಖ ಅಭಿವೃದ್ಧಿಗಾಗಿ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಬೆಳ್ಳಿ ರಥದಲ್ಲಿ ಶ್ರೀಲಕ್ಷ್ಮೀನರಸಿಂಹ ಸ್ವಾಮಿಯ ಉತ್ಸವ ಮೂರ್ತಿಯನ್ನು ವಿಶೇಷವಾಗಿ ಹೂವಿನೊಂದಿಗೆ ಅಲಂಕರಿಸಿ ವಿವಿಧ ಜಾನಪದ ತಂಡಗಳೊಂದಿಗೆ ಮೆರವಣಿಗೆ ಮಾಡಲಾಯಿತು.

ಅರ್ಚಕ ಸುಬ್ರಮಣ್ಯಂ ಪೂಜಾ ಕೈಂಕರ್ಯ ನೆರವೇರಿಸಿದರು.

ಕಾಂಗ್ರೆಸ್​ ಮುಖಂಡರಾದ ಕೆ.ಆರ್​. ಕೃಷ್ಣಮೂರ್ತಿ, ಹರ್ಷ, ಕೋಚಿಮುಲ್​ ಮಾಜಿ ಅಧ್ಯಕ್ಷ ಎನ್​.ಜಿ. ಬೇಟಪ್ಪ, ನಿರ್ದೇಶಕರಾದ ಎನ್​. ಹನುಮೇಶ್​, ಕೆ.ಕೆ. ಮಂಜುನಾಥ್​ರೆಡ್ಡಿ, ಪುರಸಭಾ ಅಧ್ಯಕ್ಷ ಭಾಸ್ಕರ್​, ಉಪಾಧ್ಯಕ್ಷೆ ಸುನಿತಾ, ಮಾಜಿ ಅಧ್ಯಕ್ಷ ಪಿ.ಎಲ್​. ಪ್ರಕಾಶ್​, ಮ್ಯಾಕಲ ನಾರಾಯಣಸ್ವಾಮಿ, ದಿಂಬಾಲ ಅಶೋಕ್​, ಸಂಜಯ್​ರೆಡ್ಡಿ, ಪುರಸಭಾ ಸದಸ್ಯರಾದ ಮುನಿರಾಜು, ನಾಗರಾಜ್​, ಶಿವರಾಜ್​, ವೈ.ಆರ್​. ಶಿವಪ್ರಕಾಶ್​, ಸೀತಾರಾಮರೆಡ್ಡಿ, ಗೋಂವಿದರೆಡ್ಡಿ, ಎನ್​.ಬಿ. ಗೋಪಾಲಗೌಡ ಇದ್ದರು.