ವಿಜಯಪುರದ ಅರ್ಜುನ ಪ್ರತಿಷ್ಟಾಪಿತ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದಲ್ಲಿ ಆಯೋಜಿಸಿದ್ದ ವಿಚಾರಧಾರೆಯ ಗೋಷ್ಠಿಯಲ್ಲಿ ವಿ.ಎಸ್​.ಎಸ್​.ಎನ್​ ಅಧ್ಯಕ್ಷ ಎಂ.ವೀರಣ್ಣ, ಓಂಕಾರೇಶ್ವರ ಸ್ವಾಮಿ ವಕ್ಕಲಿಗರ ಟ್ರಸ್ಟ್​ನ ಮಾಜಿ ಅಧ್ಯಕ್ಷ ತೋಟದಪ್ಪ ಅವರನ್ನು ಸನ್ಮಾನಿಸಲಾಯಿತು. ಟ್ರಸ್ಟ್​ ನ ಅಧ್ಯಕ್ಷ ಜೆ.ಎಸ್​ ರಾಮಚಂದ್ರಪ್ಪ, ಪುರಸಭಾ ಮುಖ್ಯಾಧಿಕಾರಿ ಸಂತೋಷ್​ ಕುಮಾರ್​, ವಿಎಸ್​ಎಸ್​ಎನ್​ ಅಧ್ಯಕ್ಷ ಎಂ.ವೀರಣ್ಣ ಇದ್ದರು. 
ಜಿಲ್ಲೆ

ಶ್ರೀಕೃಷ್ಣ ಮಾಸಿಕ ದ್ವಾದಶಿ ವಿಚಾರಧಾರೆ ಗೋಷ್ಠಿ

ಬೆಂಗಳೂರು ಗ್ರಾಮಾಂತರ ಡೆಸ್ಕ್

ವಿಜಯಪುರ: ಪಟ್ಟಣದ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದಲ್ಲಿ ಶ್ರೀ ಕೃಷ್ಣ ಯತಿಂದ್ರ ಸೇವಾಟ್ರಸ್ಟ್​ನಿಂದ ಶ್ರೀಮದ್​ ಭಗವದ್ಗೀತಾ ಪಾರಾಯಣ, ಶ್ರೀ ಕೈವಾರ ಯೋಗಿನಾರೇಯಣ ಯತೀಂದ್ರರ ಹಾಗೂ ಕನಕ ಪುರಂದರ ಗೀತಾ ತತ್ವಾಮೃತ ರಸಧಾರೆಯ 237ನೇ ಕಾರ್ಯಕ್ರಮ ಹಾಗೂ ಶ್ರೀಕೃಷ್ಣ ಮಾಸಿಕ ದ್ವಾದಶಿ ವಿಚಾರಧಾರೆ ಗೋಷ್ಠಿ ನಡೆಯಿತು.

ಉಪನ್ಯಾಸಕ ಟಿ.ಎಲ್​ ಆನಂದ್​ ಕೈವಾರ ಮಾತನಾಡಿ, ಕೈವಾರವು ಚಿಕ್ಕಬಳ್ಳಾಪುರ ಜಿಲ್ಲೆಯ ಪುಣ್ಯೇತ್ರ. ದ್ವಾಪರಯುಗದಲ್ಲಿ ಇದು ಏಕಚಕ್ರನಗರ. 1726ರಲ್ಲಿ ಬಲಿಜ ಜನಾಂಗದ ಸೇರಿದ ಮುದ್ದಮ್ಮ ಕೊಂಡಪ್ಪ ದಂಪತಿಗೆ ಹುಟ್ಟಿದ ಯೋಗಿನಾರೇಯಣರ ಜನ್ಮನಾಮ ನಾರಾಯಣಪ್ಪ. ತಂದೆ, ತಾಯಿ ದೈವಭಕ್ತರು. ಕುಲದೇವರು ಅಮರನಾರಾಯಣನ ಕೃಪೆಯಿಂದ ಗರ್ಭವತಿಯಾದಳು ಮುದ್ದಮ್ಮ. ಸೋದರತ್ತೆ ಆಸ್ತಿಯ ದುರಾಸೆಯಿಂದ ಮುದ್ದಮ್ಮ ಗರ್ಭವತಿ ಇದ್ದಾಗಲೇ ವಿಷಕೊಟ್ಟು ಗರ್ಭಪಾತ ಮಾಡಲು ಯತ್ನಿಸಿದಾಗ, ಆದಿಶೇಷ ಬಂದು ಕಾಪಾಡುತ್ತಾನೆ. ಹೀಗೆ ಜನ್ಮ ತಳೆದ ನಾರಾಣಪ್ಪನ ತಂದೆ ಬಳೆ ವ್ಯಾಪಾರಿ. ಅವರ ದುಡಿಮೆಯಲ್ಲೇ ಸಂತೃಪ್ತ ಜೀವನ ಕಂಡವರು. ಬಾಲ್ಯದಲ್ಲೇ ಹೆತ್ತವರನ್ನು ಕಳೆದುಕೊಂಡ ನಾರಾಯಣಪ್ಪ ಅಮರನಾರಾಯಣ ದೇವಸ್ಥಾನದ ಅರ್ಚಕರ ಆಶ್ರಯಲ್ಲಿ ಬೆಳೆದರು ಎಂದು ವಿವರಿಸಿದರು. ಟ್ರಸ್ಟ್​ ನ ಅಧ್ಯಕ್ಷ ಜೆ.ಎಸ್​ ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿದರು.

ಮುಖ್ಯ ಅತಿಥಿಗಳಾಗಿ ಪುರಸಭಾ ಮುಖ್ಯಾಧಿಕಾರಿ ಸಂತೋಷ್​ ಕುಮಾರ್​, ಓಂಕಾರೇಶ್ವರ ಸ್ವಾಮಿ ವಕ್ಕಲಿಗರ ಟ್ರಸ್ಟ್​ನ ಮಾಜಿ ಅಧ್ಯಕ್ಷ ತೋಟದಪ್ಪ ಹಾಗೂ ರಮೇಶ್​ ಸ್ವಾಮಿ ಉಪಸ್ಥಿತರಿದ್ದರು. ಐವರು ಮಹಿಳೆಯರಿಗೆ ಕಂಬಳಿ, ಬಟ್ಟೆ, ಅರಿಶಿನ, ಕುಂಕುಮ ಬಳೆ, 3 ವಿದ್ಯಾರ್ಥಿಗಳಿಗೆ ಬ್ಯಾಗ್​ ವಿತರಣೆ ಮಾಡಲಾಯಿತು. ಸಂಗೀತ ನಿರ್ದೇಶಕ ಎಂ.ವಿ ನಾಯ್ಡು, ಮುನಿರಾಜು, ಅನಿಲ್​ ಕುಮಾರ್​, ವಾದ್ಯದೊಂದಿಗೆ ಟಿ.ಮಹಾತ್ಮಾಂಜನೇಯ, ನರಸಿಂಹಪ್ಪ, ರಾಧಾಮಣಿ, ಸೀತಾಲ್ಮ ಕೀರ್ತನೆಗಳನ್ನು ಹಾಡಿದರು. ಭಕ್ತಿ ಸೇವೆಯನ್ನು ಕೆಂಪಮ್ಮ ಮತ್ತು ಮಕ್ಕಳು, ಗೀತಮ್ಮ, ರಾಜಣ್ಣ ಮತ್ತು ಮಕ್ಕಳು ನೆರೆವೇರಿಸಿದರು. ವಿ.ಎನ್​. ವೆಂಕಟೇಶ್​, ನಾಗಯ್ಯ ಕಾರ್ಯಕ್ರಮ ನಡೆಸಿಕೊಟ್ಟರು.