ಜಿಲ್ಲೆ

ಬೆಳಾಲು ಮೈತ್ರಿ ಯುವಕ ಮಂಡಲದಿಂದ ಸ್ಪರ್ಧೆ

ಸೌಮ್ಯ ಆರ್

ಬೆಳ್ತಂಗಡಿ: ಬೆಳಾಲು ಮೈತ್ರಿ ಯುವಕ ಮಂಡಲ ವತಿಯಿಂದ ಮೊಸರು ಕುಡಿಕೆ ಉತ್ಸವ, ಕೃಷ್ಣವೇಷ, ಆಟೋಟ ಸ್ಪರ್ಧೆ ಸಂದ ವಠಾರದಲ್ಲಿ ಭಾನುವಾರ ನಡೆಯಿತು.

ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲಾ ಮುಖ್ಯ ಶಿಕ್ಷಕ ಜಯರಾಮ್ ಮಯ್ಯ ಕಾರ್ಯಕ್ರಮ ಉದ್ಘಾಟಿಸಿದರು.

ಮಕ್ಕಳಿಗೆ ಕೃಷ್ಣವೇಷ ಸ್ಪರ್ಧೆಯೂ ವಿಶೇಷ ಆಕರ್ಷಣೆಗೊಂಡಿತು. ಗ್ರಾಮಸ್ಥರಿಗೆ ವಿವಿಧ ಆಟೋಟ ಸ್ಪರ್ಧೆಯೂ ನಡೆಯಿತು.

ಬೆಳಾಲು ಗ್ರಾಪಂ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಗೌಡ, ಉಪಾಧ್ಯಕ್ಷೆ ಗೀತಾ, ಮೈತ್ರಿ ಯುವಕ ಮಂಡಲ ಗೌರವಾಧ್ಯಕ್ಷ ರಾಜೇಶ್ ಪಾರಳ, ಅಧ್ಯಕ್ಷ ನಿತಿನ್ ಮೋನಿಸ್, ಕಾರ್ಯದರ್ಶಿ ವ್ನಿೇಶ್ ಅನಂತೋಡಿ ಮೊದಲಾದವರಿದ್ದರು. ವಕೀಲ ಶ್ರೀನಿವಾಸ ಗೌಡ ಹಾಗೂ ಅಧ್ಯಾಪಕ ಭರತ್ ಕುಮಾರ್ ನಿರೂಪಿಸಿದರು. ವ್ನಿೇಶ್ ಅನಂತೋಡಿ ವಂದಿಸಿದರು.