ಸುಬ್ರಹ್ಮಣ್ಯ: ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿ ಆಶ್ರಯದಲ್ಲಿ 21ನೇ ವರ್ಷದ ಸಾರ್ವಜನಿಕ ಮೊಸರು ಕುಡಿಕೆ ಮತ್ತು ಸಾಂಪ್ರದಾಯಿಕ ಅಟ್ಟಿ ಮಡಕೆಯನ್ನು ಭಾನುವಾರ ಉದ್ಘಾಟಿಸಲಾಯಿತು.
ಸುಬ್ರಹ್ಮಣ್ಯ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಮಾಧವ ಮೂಕಮಲೆ ಕಾರ್ಯಕ್ರಮ ಉದ್ಘಾಟಿಸಿದರು.
ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ವಾನಾಡು ಅಧ್ಯಕ್ಷತೆ ವಹಿಸಿದ್ದರು. ಸ್ಥಾಪಕಾಧ್ಯಕ್ಷ ಉಮೇಶ್ ಕೆ.ಎನ್., ಪೂರ್ವಾಧ್ಯಕ್ಷರಾದ ರಾಜೇಶ್ ಎನ್.ಎಸ್., ಶ್ರೀಕೃಷ್ಣ ಶರ್ಮ, ವೆಂಕಟೇಶ್ ಎಚ್.ಎಲ್., ದೀಪಕ್ ನಂಬಿಯಾರ್, ರವಿ ಕಕ್ಕೆಪದವು, ನಿತಿನ್ ಭಟ್, ಪ್ರಶಾಂತ್ ಆಚಾರ್ಯ, ಸಮಿತಿ ಕಾರ್ಯದರ್ಶಿ ಹರ್ಷಿತ್ ನೂಚಿಲ, ಜತೆ ಕಾರ್ಯದರ್ಶಿ ದಿನೇಶ್ ಎಸ್.ಎನ್. ಮೊದಲಾದವರಿದ್ದರು. ಆರಂಭದಲ್ಲಿ ಸುಭಾಶಿಣಿ ಶಿವರಾಂ ನೇತೃತ್ವದಲ್ಲಿ ಭಗವದ್ಗೀತಾ ಪಾರಾಯಣ ನೆರವೇರಿತು.