ಜಿಲ್ಲೆ

ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ಸೆಪ್ಟೆಂಬರ್ 1ರಂದು

ಹುಬ್ಬಳ್ಳಿ: ಇಲ್ಲಿನ ಗೋಪನಕೊಪ್ಪ ಗೊಲ್ಲರ ಓಣಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಶ್ರೀ ಬಾಳೇಕುಂದ್ರಿ ಪಂತ ಮಹಾರಾಜರ ಜನ್ಮಾಷ್ಟಮಿ ಉತ್ಸವ ಮತ್ತು ಕಳಸಾರೋಹಣ ಸಮಾರಂಭ ಸೆ. 1ರಿಂದ ಹಮ್ಮಿಕೊಳ್ಳಲಾಗಿದೆ.

ಸುಳ್ಳದ ಶ್ರೀಶಿವ ಸಿದ್ಧ್ದಾಮ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸುವರು.

ಸೆ. 1ರಂದು ಬೆಳಗ್ಗೆ 9ಗಂಟೆಗೆ ಶೆಟಿಗೆಮ್ಮದೇವಿ ದೇವಸ್ಥಾನದಿಂದ ಮೆರವಣಿಗೆ ಆರಂಭವಾಗಿ ಪಂತ ಮಹಾರಾಜರ ದೇವಸ್ಥಾನದ ವರೆಗೆ ನಡೆಯಲಿದೆ.