ಹುಬ್ಬಳ್ಳಿ: ಇಲ್ಲಿಯ ನವನಗರದ ಭಗಿನಿ ನಿವೇದಿತಾ ವಿದ್ಯಾಲಯದಲ್ಲಿ ಶನಿವಾರ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ವಕ್ತಾರೆ ಸುಮಾ ದೇಸಾಯಿ ಮಾತನಾಡಿ, ಮಕ್ಕಳಿಗೆ ಈಗಿನಿಂದಲೇ ಸಂಸ್ಕಾರ ಕಲಿಸಬೇಕು. ಜೀವನದಲ್ಲಿ ಸಂಸ್ಕಾರಕ್ಕೆ ದೊಡ್ಡ ಮೌಲ್ಯವಿದೆ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಕರವೀರಪ್ಪ ಮಡಿವಾಳಜಿ ಅಧ್ಯಕ್ಷತೆ ವಹಿಸಿದ್ದರು.
ವಕ್ತಾರ ಸದಾನಂದ ದೇಸಾಯಿ, ಈಶ್ವರ ಮಾಳಣ್ಣವರ, ಮುಖ್ಯಗುರುಗಳಾದ ಕಲಾವತಿ ಜೀರಿಗಿವಾಡ, ರಾಜು ಹೈಬತ್ತಿ ಉಪಸ್ಥಿತರಿದ್ದರು.
ಭಾರತಿ ಹುಲ್ಲಂಬಿ ನಿರೂಪಿಸಿದರು. ನಂದಾ ಹೂಲಿಕಟ್ಟಿ ವಂದಿಸಿದರು.