ಹುಣಸೂರು ನಗರದ ನಡುಬೀದಿಯಲ್ಲಿ ಜೀರ್ಣೋದ್ಧಾರಗೊಂಡ ಶ್ರೀ ಕೋಲನೂರು ಮಾರಿಯಮ್ಮ ದೇವಸ್ಥಾನ. 
ಜಿಲ್ಲೆ

ಶ್ರೀ ಕೋಲನೂರು ಮಾರಿಯಮ್ಮ ಕುಂಭಾಭಿಷೇಕ ಸಂಪನ್ನ

ಹುಣಸೂರು: ನಗರದ ನಡುಬೀದಿಯ ಶ್ರೀ ಕೋಲನೂರು ಮಾರಿಯಮ್ಮ ದೇವಾಲಯ ಜೀರ್ಣೋದ್ಧಾರದ ಅಂಗವಾಗಿ ಮೂರು ದಿನಗಳ ಕಾಲ ಆಯೋಜನೆಗೊಂಡಿದ್ದ ವಿಮಾನಗೋಪುರ, ರಾಜಗೋಪುರ, ಕಲಶ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕ ಕಾರ್ಯಕ್ರಮವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಗಳಿಂದ ನೆರವೇರಿತು.

ಏ.13ರಿಂದ 15ರವರೆಗೆ ಆಯೋಜನೆಗೊಂಡಿದ್ದ ಧಾರ್ಮಿಕ ಕಾರ್ಯಕ್ರಮಗಳು ಭಕ್ತರಲ್ಲಿ ಸಂಭ್ರಮ ಸಡಗರದಿಂದ ಪಾಲ್ಗೊಂಡಿದ್ದರು. ಏ.13ರಂದು ಬೆಳಗ್ಗೆ ದೇವಿಗೆ ದೀಪಾರಾಧನೆ, ಗುರುಪ್ರಾರ್ಥನೆಯೊಂದಿಗೆ ಆರಂಭಗೊಂಡು, ಗೋಮಾತೆಯೊಂದಿಗೆ ಗಂಗಾಪೂಜೆ, ಆಲಯ ಪ್ರದೇಶ, ಶುದ್ಧಿ ಪುಣ್ಯಾಯ, ರಕ್ಷಾಬಂಧನ, ಪಂಚಗವ್ಯ, ವಾಸ್ತು ಆರಾಧನೆ, ವಾಸ್ತು ಬಲಿ, ಲಘು ಪೂರ್ಣಾಹುತಿ, ಮಹಾಮಂಗಳಾರತಿಯ ನಂತರ ಪ್ರಸಾದ ವಿನಿಯೋಗಿಸಲಾಯಿತು. ಸಂಜೆ ವೇದ ಪಾರಾಯಣ, ಕಳಸ ಸ್ಥಾಪನೆ, ಅಕ್ಕಿ ಪ್ರತಿಷ್ಠಾಪನೆ, ಪರಿವಾರ ಹೋಮ, ಪಂಚಸೂಕ್ತಿ ಹೋಮ, ತತ್ವ ಹೋಮ, ಲಘು ಪೂರ್ಣಾಹುತಿಯ ನಂತರ ಮಹಾಮಂಗಳಾರತಿಯೊಂದಿಗೆ ಪ್ರಸಾದ ವಿನಿಯೋಗಿಸಲಾಯಿತು.

ಏ.14ರಂದು ಬೆಳಗ್ಗೆ ನಿತ್ಯಾರಾಧನೆಯ ನಂತರ ಪಂಚಾಮೃತ ಅಭಿಷೇಕ, ಕಲಶ ಪ್ರತಿಷ್ಠಾಪನೆ, ದೇವರಿಗೆ ಅಲಂಕಾರ, ನಿತ್ಯ ಹೋಮ, ಚಂಡಿಕಾ ಹೋಮ, ಪೂರ್ಣಾಹುತಿ ನಂತ

ರ ರಾಜಬೀದಿಯಲ್ಲಿ ಉತ್ಸವ,ಮಧ್ಯಾಹ್ನ 1ಗಂಟೆಗೆ ಮಹಾಮಂಗಳಾರತಿ ನಂತರ ತೀರ್ಥಪ್ರಸಾದ ವಿನಿಯೋಗಿಸಲಾಯಿತು.

ಏ.15ರಂದು ಮಧ್ಯಾಹ್ನ 12 ಗಂಟೆಯಿಂದ ಆಯೋಜನೆಗೊಂಡಿದ್ದ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿಧನ್ಯರಾದರು. ಮಾಜಿ ಶಾಸಕ ಮಂಜುನಾಥ್ ಮತ್ತು ಅವರ ತಾಯಿ ರತ್ನಮ್ಮ ಪ್ರೇಮ್‌ಕುಮಾರ್ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿದ್ದರು.