ಎಂ.ಕೆ.ಹುಬ್ಬಳ್ಳಿ: ಪಟ್ಟಣದಲ್ಲಿ ಶ್ರೀ ಕಲ್ಮೇಶ್ವರ ಮಹಾರಥೋತ್ಸವ ಸಹಸ್ರಾರು ಭಕ್ತರ ಹಷೋರ್ದ್ಗಾರದೊಂದಿಗೆ ಸೋಮವಾರ ಜರುಗಿತು. ಶ್ರೀ ನಂದಿಕೇಶ್ವರ ದೇವಸ್ಥಾನದಿಂದ ಆರಂಭಗೊಂಡ ಶ್ರೀ ಕಲ್ಮೇಶ್ವರ ಮಹಾರಥೋತ್ಸವ ಪೇಟೆಕೂಟದ ವರೆಗೆ ಸಾಗಿತು. ಹರ ಹರ ಮಹಾದೇವ ಎಂಬ ಭಕ್ತಿಯ ಜೆಕಾರ ಮಾರ್ದನಿಸಿತು. ಭಕ್ತೀಗಿತೆ, ಭಜನೆ, ಡೊಳ್ಳು ಮತ್ತು ರಂಜ್ ಪಥಕ ನಾದ ರಥೋತ್ಸವಕ್ಕೆ ಮೆರಗು ತಂತು. ಸಂಗೀತ ಗೀತೆಗಳಿಗೆ ಕೇಸರಿ ಭಾವುಟ ಹಿಡಿದು ಯುವಕರು ಕುಣಿದರು. ಮಾ.28ರಿಂದ ಆರಂಭಗೊಂಡಿರುವ ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ಪ್ರತಿದಿನ ವಿವಿಧ ಧಾರ್ಮಿಕ ಮತ್ತು ಸಾಂಸತಿಕ ಕಾರ್ಯಕ್ರಮಗಳು ನಡೆದವು. ದೇವರಿಗೆ ವಿಶೇಷ ಪೂಜೆ, ಅಭಿಷೇಕ, ಮಹಾಪ್ರಸಾದ ನೆರವೇರಿತು.