ಅರಸೀಕೆರೆ (ಗ್ರಾಮಾಂತರ ) ತಾಲೂಕಿನ ಬಾಣಾವರ ಹೋಬಳಿಯ ಮನಕತ್ತೋರು ಗ್ರಾಮದ ಶ್ರೀ ಕಾಲಭೈರವೇಶ್ವರ ಸ್ವಾಮಿ ರಥೋತ್ಸವ ಅದ್ದೂರಿಯಾಗಿ ನೆರವೇರಿತು. 
ಜಿಲ್ಲೆ

ಶ್ರೀ ಕಾಲಭೈರವೇಶ್ವರ ರಥೋತ್ಸವ ಅದ್ದೂರಿ

 ಅರಸೀಕೆರೆ (ಗ್ರಾಮಾಂತರ): ತಾಲೂಕಿನ ಬಾಣಾವರ ಹೋಬಳಿಯ ಮನಕತ್ತೂರು ಗ್ರಾಮದ ಶ್ರೀ ಕಾಲಭೈರವೇಶ್ವರ ಸ್ವಾಮಿಯನ್ನು ನೂತನ ರಥದಲ್ಲಿ ಪ್ರತಿಷ್ಠಾಪಿಸಿ ರಥೋತ್ಸವ ನೆರವೇರಿಸಲಾಯಿತು.

ಬೆಳಗ್ಗೆ ಶ್ರೀ ವೀರಭದ್ರೇಶ್ವರ ಸ್ವಾಮಿ ಕೊಂಡೋತ್ಸವ ನೆರವೇರಿದ ಬಳಿಕ ರಥಕ್ಕೆ ಪೂಜೆ ಸಲ್ಲಿಸಿ ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳಿಂದ ಪಾನಕದ ಗಾಡಿ ಓಡಿಸಿ ವಸಂತ ಸೇವೆ, ದಿವ್ಯ ರಥೋತ್ಸವವನ್ನು ಸಾವಿರಾರು ಭಕ್ತರ ಜಯಘೋಷದೊಂದಿಗೆ ನೆರವೇರಿಸಲಾಯಿತು. ರಥೋತ್ಸವಕ್ಕೆ ಆಗಮಿಸಿದ್ದ ಭಕ್ತರಿಗೆ ಅನ್ನಸಂತರ್ಪಣೆ ಜರುಗಿತು. ರಥೋತ್ಸವದ ಅಂಗವಾಗಿ ಕಾಲಭೈರವೇಶ್ವರ ಸ್ವಾಮಿಯವರ ಮೂಲ ವಿಗ್ರಹಕ್ಕೆ ಬೆಳ್ಳಿಯ ಕವಚವನ್ನು ತೊಡಿಸಿ ಅಲಂಕರಿಸಲಾಲಾಗಿತ್ತು.

ರಥೋತ್ಸವದ ಅಂಗವಾಗಿ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಅಂಕುರಾರ್ಪಣೆ, ಪಲ್ಲಕ್ಕಿಉತ್ಸವ, ಧ್ವಜಾರೋಹಣ, ಮುತ್ತಿನ ಪಲ್ಲಕ್ಕಿ ಉತ್ಸವ, ವೃಷಭವಾಹನೋತ್ಸವ, ಅಶ್ವವಾಹನೋತ್ಸವ, ಸಿಂಹ ವಾಹನೋತ್ಸವ, ಚಪ್ಪರವಾಹನ ಉತ್ಸವ, ಸರ್ಪ ವಾಹನೋತ್ಸವ, ಬಿಲ್ವವೃಕ್ಷೋತ್ಸವ, ಬಸವ ಪಲ್ಲಕ್ಕಿ ಉತ್ಸವ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರುಗಿದವು.