ಬಸವಕಲ್ಯಾಣದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ನಿಮಿತ್ತ ನಡೆದ ಬಸವ ತತ್ವ ಆಧ್ಯಾತ್ಮಿಕ ಪ್ರವಚನದ ಸಮಾರೋಪದಲ್ಲಿ ಶ್ರೀ ಸಂಗಮೇಶ್ವರ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು. ಶ್ರೀ ಪ್ರಣವಾನಂದ ಸ್ವಾಮೀಜಿ, ಬಸವರಾಜ ಕೋರಕೆ, ಶಶಿಕಾಂತ ದುರ್ಗೆ, ಡಾ.ಜಿ.ಎಸ್.ಭುರಳೆ, ಮಲ್ಲಿಕಾರ್ಜುನ ಚಿರಡೆ, ರಾಜಕುಮಾರ ಹೊಳಕುಂದೆ, ಶ್ರೀಕಾಂತ ಬಡದಾಳೆ, ವಿವೇಕಾನಂದ ಹೊದಲುರೆ, ಜಗನ್ನಾಥ ಖೂಬಾ, ಮಲ್ಲಯ್ಯಸ್ವಾಮಿ ಹಿರೇಮಠ, ಕಾಶಪ್ಪ ಸಕ್ಕರಬಾವಿ, ಭದ್ರಿನಾಥ ಪಾಟೀಲ್, ಗದಗೆಪ್ಪ ಹಲಶೆಟ್ಟೆ ಇದ್ದರು.  
ಜಿಲ್ಲೆ

ಹೃದಯವಿರುವುದು ಹೃದಯವಂತಿಕೆಯಿಂದ ಬಾಳಲು

ಬಸವಕಲ್ಯಾಣ: ಸದಾಚಾರ ಅಳವಡಿಸಿಕೊಂಡು ಸತ್ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ಬದುಕಿನಲ್ಲಿ ಶಾಂತಿ, ನೆಮ್ಮದಿ ಮತ್ತು ಸಾರ್ಥಕತೆ ಕಾಣಲು ಸಾಧ್ಯವಾಗುತ್ತದೆ ಎಂದು ವಿಜಯಪುರದ ಜ್ಞಾನ ಯೋಗಾಶ್ರಮದ ಶ್ರೀ ಸಂಗಮೇಶ್ವರ ಸ್ವಾಮೀಜಿ ನುಡಿದರು.

ನಗರದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಹಾಗೂ ವಿಶ್ವಸ್ಥ ಸಮಿತಿಯಿಂದ ಸೋಮವಾರ ಸಂಜೆ ಆಯೋಜಿಸಿದ್ದ ಶ್ರಾವಣ ಮಾಸದ ನಿಮಿತ್ತ ಒಂದು ತಿಂಗಳು ನಡೆದ ಬಸವ ತತ್ವ ಆಧ್ಯಾತ್ಮಿಕ ಪ್ರವಚನದ ಸಮಾರೋಪ ಸಮಾರಂಭದಲ್ಲಿ ನೇತೃತ್ವ ವಹಿಸಿ ಮಾತನಾಡಿದರು.

ದೇವರು ನಮಗೆ ಸುಂದವಾದ ಜೀವನ ನೀಡಿದ್ದಾನೆ. ಕಿವಿಗಳನ್ನು ಕೊಟ್ಟಿರುವುದು ಉತ್ತಮ ಮಾತು ಕೇಳಲು, ಕಣ್ಣು ಇರುವುದು ಒಳ್ಳೆಯದನ್ನು ನೋಡಲು, ಕೈಗಳನ್ನು ಕೊಟ್ಟಿರುವುದು ಉತ್ತಮ ಕಾರ್ಯ ಮಾಡಲು, ಹೃದಯ ಕೊಟ್ಟಿರುವುದು ಹೃದಯವಂತಿಕೆಯಿಂದ ಬಾಳುವುದಕ್ಕೆ. ಒಂದು ಹೂ ಒಂದೇ ದಿನ ಬದುಕಿದರೂ ಎಲ್ಲರ ಪ್ರೀತಿಗೆ ಪಾತ್ರವಾಗಿ ಬದುಕುವಂತೆ ನಾವು ಕೂಡ ಇರುವಷ್ಟು ದಿನ ಎಲ್ಲರ ಪ್ರೀತಿಗೆ ಪಾತ್ರರಾಗಿ ಜೀವನ ಸುಂದರವಾಗಿಸಿಕೊಳ್ಳಬೇಕಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಮುಚಳಂಬದ ಶ್ರೀ ಪ್ರಣವಾನಂದ ಸ್ವಾಮೀಜಿ ಪ್ರವಚನ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಕೆ ಮಾತನಾಡಿದರು. ನಿರ್ದೇಶಕ ಕಾಶಪ್ಪ ಸಕ್ಕರಬಾವಿ ಹಾಗೂ ಮಮತಾ ಭೂಸೆ ಪ್ರವಚನ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡರು.

ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ, ಬಿಡಿಪಿಸಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಚಿರಡೆ, ಕೋಶಾಧ್ಯಕ್ಷ ರಾಜಕುಮಾರ ಹೊಳಕುಂದೆ, ಸಹಕಾರ್ಯದರ್ಶಿ ವಿವೇಕಾನಂದ ಹೊದಲುರೆ, ನಿರ್ದೇಶಕರಾದ ಜಗನ್ನಾಥ ಖೂಬಾ, ಮಲ್ಲಯ್ಯ ಸ್ವಾಮಿ ಹಿರೇಮಠ, ಭದ್ರಿನಾಥ ಪಾಟೀಲ್, ವಿಜಯಲಕ್ಷ್ಮೀ ಗಡ್ಡೆ, ವಿಶ್ವಸ್ಥ ಸಮಿತಿಯ ಉಪಾಧ್ಯಕ್ಷ ಡಾ.ಜಿ.ಎಸ್.ಭುರಳೆ, ವಿಶ್ವಸ್ಥರಾದ ಗದಗೆಪ್ಪ ಹಲಶೆಟ್ಟೆ ಇದ್ದರು. ಪಂಚ ಕಮಿಟಿ ಕಾರ್ಯದರ್ಶಿಗಳಾದ ಶ್ರೀಕಾಂತ ಬಡದಾಳೆ ಸ್ವಾಗರಿಸಿದರು. ಜ್ಯೋತಿ ತುಗಾಂವೆ ನಿರೂಪಣೆ ಮಾಡಿ ವಂದಿಸಿದರು.