ಜಿಲ್ಲೆ

ಶ್ರೀ ಜಡೇ ಶಂಕರಲಿಂಗ ದೇವಸ್ಥಾನ ಲೋಕಾರ್ಪಣೆ ನಾಡಿದ್ದು

ರುದ್ರಪ್ಪ ವಾಲಿ

ಸಿಂಧನೂರು: ನಗರದ ಬಪ್ಪೂರು ರಸ್ತೆಯಲ್ಲಿ ನಿರ್ಮಾಣವಾಗಿರುವ ಶ್ರೀ ಜಡೇ ಶಂಕರಲಿಂಗ ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮ ನ.13 ಮತ್ತು 14 ರಂದು ನಡೆಯಲಿದೆ ಎಂದು ಬಣಗಾರ ಸಿಂಪಿ(ನಾಗಲೀಕರ್) ಸಮಾಜದ ತಾಲೂಕು ಅಧ್ಯಕ್ಷ ಎಲ್.ಅಮರೇಶಪ್ಪ ನಾಗಲೀಕರ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಶಕದ ಬಳಿಕ ದೇವಸ್ಥಾನ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ನ.13 ರಂದು ಪುರಪ್ರವೇಶ, ಕೋಟೆ ಈರಣ್ಣ ಕಲ್ಯಾಣ ಮಂಟಪದಿಂದ ಜಡೆಯ ಶಂಕರಲಿಂಗ, ಗಣಪತಿ ಹಾಗೂ ನಂದಿಯ ಸಮೇತ ಮೆರವಣಿಗೆ ಮೂಲಕ ನೂತನ ದೇವಸ್ಥಾನಕ್ಕೆ ತಲುಪಲಿದೆ. ನ.14 ರಂದು ಬ್ರಾಹ್ಮಿ ಮೂಹೂರ್ತದಲ್ಲಿ ನೂತನ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುವುದು.

ರಂಭಾಪುರಿ ಶಾಖಾಮಠದ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಮಠಾಧೀಶರು ಹಾಲಿ ಮಾಜಿ ಶಾಸಕರು, ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ವೀರಶೈವ ಸಮಾಜದ ಜನತೆ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದರು.

ಭೂದಾನಿ ಶರಣಪ್ಪ ನಾಗಲೀಕರ್, ಲಕ್ಷ್ಮಯ್ಯಸ್ವಾಮಿ ಭಾವಿಕಟ್ಟಿಮಠ, ಖಜಾಂಚಿ ಶರಣಪ್ಪ ಹಾರಾಪುರ, ಕಾರ್ಯದರ್ಶಿ ರಮೇಶ ನಾಗಲೀಕರ್, ಸಂಗಪ್ಪ ಮಜ್ಜಿಗಿ, ವೀರೇಶ ನಾಗಲೀಕರ ಜವಳಗೇರಾ, ಶಿವಪುತ್ರ ಧನಶೆಟ್ಟಿ ಮಸ್ಕಿ, ಬಸವರಾಜ ನಾಗಲೀಕರ ಇತರರಿದ್ದರು.