ಹನುಮಸಾಗರ ಸಮೀಪದ ಸೇಬಿನಕಟ್ಟಿ ಗ್ರಾಮದಲ್ಲಿ ಶ್ರೀ ಹನುಮಧೂತ ರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ವಿಜೃಂಭಣೆಯಿಂದ ಜರುಗಿತು. 
ಜಿಲ್ಲೆ

ಶ್ರೀ ಹನುಮಧೂತ ರಥೋತ್ಸವ ಅದ್ದೂರಿ

ಹನುಮಸಾಗರ: ಸಮೀಪದ ಸೇಬಿನಕಟ್ಟೆ ಗ್ರಾಮದಲ್ಲಿ ಶ್ರೀ ಹನುಮಧೂತ ಜಾತ್ರೋತ್ಸವ ನಿಮಿತ್ತ ಬುಧವಾರ ಬೆಳಗ್ಗೆ ದೇವಸ್ಥಾನದಲ್ಲಿ ಹೋಮ-ಹವನ, ಪಂಚಾಮೃತ ಅಭಿಷೇಕ, ಅಲಂಕಾರ, ಮಹಾಮಂಗಳಾರತಿ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ನಂತರ ಜನಪದ ವಾದ್ಯ ಮೇಳದೊಂದಿಗೆ ಕುಂಭ ಮೆರವಣಿಗೆ ನಡೆಯಿತು. ಕುಂಬಳಾವತಿ ಗ್ರಾಮದಿಂದ ಕಲಶ, ಯರಗೇರಾ ಗ್ರಾಮದಿಂದ ರಥದ ಹಗ್ಗ ಹಾಗೂ ಮದ್ನಾಳ ಗ್ರಾಮದಿಂದ ನಂದಿಕೋಲುಗಳನ್ನು ಮೆರವಣಿಗೆ ಮೂಲಕ ಸೇಬಿನಕಟ್ಟಿ ಗ್ರಾಮಕ್ಕೆ ತರಲಾಯಿತು. ಸಂಜೆ ನೂರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ಜರುಗಿತು. ಭಕ್ತರು ರಥಕ್ಕೆ ಉತ್ತತ್ತಿ, ಪುಷ್ಪ ಸಮರ್ಪಿಸಿ ಭಕ್ತಿ ಸಮರ್ಪಿಸಿದರು.