ಕೊಟ್ಟೂರು: ಪಟ್ಟಣದ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಹುಂಡಿ ಹಣ ಎಣಿಕೆ ಮಾಡಿದ್ದು, 65.63 ಲಕ್ಷ ರೂ. ಸಂಗ್ರಹವಾಗಿದೆ.
ಭಕ್ತರು 343.97 ಗ್ರಾಂ ಕಚ್ಚ ಬಂಗಾರ ಹಾಗೂ 4030 ಗ್ರಾಂ ಶುದ್ಧ ಬೆಳ್ಳಿ ವಸ್ತುಗಳು ಹಾಗೂ 7520 ಗ್ರಾಂ ಕಚ್ಚಾ ಬೆಳ್ಳಿ ಸಾಮಗ್ರಿ ಹಾಗೂ 65,63,795 ರೂ. ನಗದು ಕಾಣಿಕೆ ನೀಡಿದ್ದಾರೆ.
ಏಪ್ರಿಲ್ 19ರ ಬಳಿಕ 6 ತಿಂಗಳ ಅವಧಿಯಲ್ಲಿ ಬೆಳ್ಳಿ ಬಂಗಾರ, 65.63 ಲಕ್ಷ ರೂ. ಸಂಗ್ರಹವಾಗಿವೆ. ಈ ಹಣವನ್ನು ದೇವಸ್ಥಾನದ ಅಭಿವೃದ್ಧಿಗೆ ಬಳಸಲಾಗುವುದು ಎಂದು ದೇವಾಲಯದ ಇಒ ಹನುಮಂತಪ್ಪ ತಿಳಿಸಿದ್ದಾರೆ.
ಹಿಂದು ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ಎಚ್.ಗಂಗಾಧರಪ್ಪ, ಧರ್ಮಕರ್ತ ಎಂ.ಕೆ. ಶೇಖರಯ್ಯ, ಪ್ರಗತಿ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ಸುಜೇಂದ್ರ ಕುಮಾರ್, ಕನ್ನಿಹಳ್ಳಿ ಗುರುಬಸವರಾಜ್, ಕೆ.ಎಸ್.ಪ್ರೇಮಾನಂದ ಗೌಡ, ಕೆ.ಎಸ್. ನಾಗರಾಜ್ ಗೌಡ್ರು, ಧಾರ್ಮಿಕ ದತ್ತಿ ಇಲಾಖೆಯ ಮಲ್ಲಪ್ಪ, ಕಾರ್ತಿಕ, ಎಚ್. ಸುರೇಶ, ಪ್ರದೀಪ್, ರೇಣುಕಮ್ಮ, ಎಂ. ನಾಗರಾಜ್, ಕೊಟ್ರೇಶ್ವರಿ ಇತರರಿದ್ದರು.