ಉಳ್ಳಾಗಡ್ಡಿ-ಖಾನಾಪುರ: ಸಮೀಪದ ಹೆಬ್ಬಾಳ ಗ್ರಾಮದ ಶ್ರೀ ಗುಪ್ತಾದೇವಿ ಜಾತ್ರೆ ಏ.26ರಿಂದ ಏ.30 ರ ವರೆಗೆ ಜರುಗಲಿದೆ. ಏ.26 ರಂದು ರಾತ್ರಿ ಉಡಿ ತುಂಬುವ ಕಾರ್ಯಕ್ರಮ, ರಾಧಾ ಕೃಷ್ಣ ನಾಟಕ, ಏ.27ರಂದು ಗುಪ್ತಾದೇವಿ ಕಟ್ಟಿನ ನೈವೇದ್ಯ, ಏ.28ರಂದು ದಂಡವತ ಅಂಬಲಿ ಕೊಡಗಳ ಮೆರವಣಿಗೆ ಜರುಗಲಿದೆ.
ಮಧ್ಯಾಹ್ನ ಮಹಾಪ್ರಸಾದ, ಏ.29ರಂದು ಗ್ರಾಮಸ್ಥರಿಂದ ನೈವೇದ್ಯ ಅರ್ಪಣೆ, ಬೆಳಗ್ಗೆ 8ಕ್ಕೆ ಹಲ್ಲು ಹಚ್ಚದ ಒಂದು ಹೋರಿ ಒಂದು ಕುದುರೆ ಗಾಡಿ ಸ್ಪರ್ಧೆ, ಬೆಳಗ್ಗೆ 8.30ಕ್ಕೆ ಒಂದು ಎತ್ತು ಒಂದು ಕುದುರೆ ಗಾಡಿ ಸ್ಪರ್ಧೆ, ಬೆಳಗ್ಗೆ 9ಕ್ಕೆ ಜೋಡು ಕುದುರೆ ಗಾಡಿ ಸ್ಪರ್ಧೆ, ಬೆಳಗ್ಗೆ 9.30ಕ್ಕೆ ಜೋಡೆತ್ತಿನ ಗಾಡಿ ಸ್ಪರ್ಧೆ, ರಾತ್ರಿ 10.30ಕ್ಕೆ ಸಿಡಿದ್ದೆದ್ದ ರೈತರು ನಾಟಕ ಪ್ರದರ್ಶನವಿದೆ. ಮಾಹಿತಿಗೆ 7353145506 ಸಂಪರ್ಕಿಸುವಂತೆ ಶ್ರೀ ಗುಪ್ತಾದೇವಿ ಜಾತ್ರಾ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.