ವಿಜಯವಾಣಿ ಸುದ್ದಿಜಾಲ ಧಾರವಾಡ
ಶ್ರೀ ದತ್ತ ಜಯಂತಿ ಮಹೋತ್ಸವ ನಿಮಿತ್ತ ನಗರದ ಗಾಂಧಿಚೌಕ್ನ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಡಿ. 7ರಿಂದ 15ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಡಿ. 7ರಂದು ಬೆಳಗ್ಗೆ 6 ಗಂಟೆಗೆ ಅಖಂಡ ದಿಗಂಬರ ನಾಮ ಸಪ್ತಾಹ ಆರಂಭವಾಗಲಿದೆ. ಸಂಜೆ 5.30ಕ್ಕೆ ಐಶ್ವರ್ಯ ದೇಸಾಯಿ ಅವರಿಂದ ಸಂಗೀತ, ಡಿ. 8ರಂದು ಸಂಜೆ ಶಂಕರ ಭಜನಾ ಮಂಡಳದಿಂದ ಭಜನೆ, 6 ಗಂಟೆಗೆ ನಾಗಲಕ್ಷ್ಮೀ ಮೈಸೂರು ಅವರಿಂದ ಹರಿಕೀರ್ತನೆ ನಡೆಯಲಿದೆ.
ಡಿ. 9ರಂದು ಬೆಳಗ್ಗೆ 8 ಗಂಟೆಗೆ 108 ಶ್ರೀ ಗುರುಚರಿತ್ರೆ ಪಾರಾಯಣ ಆರಂಭವಾಗಲಿದೆ. 9 ಗಂಟೆಗೆ ಮಹಾಗಣಪತಿ ಹೋಮ, 11 ಗಂಟೆಗೆ ಮಧುಕರಿ ಸೇವೆ, 12 ಗಂಟೆಗೆ ಮಹಾಮಂಗಳಾರತಿ ನಡೆಯಲಿದೆ. ಸಂಜೆ 5 ಗಂಟೆಗೆ ಸಾಕೇತ ಜೋಗಳೇಕರ ಅವರಿಂದ ಕೊಳಲು ಹಾಗೂ ಅನಿರುದ್ಧ ಜೋಶಿ ಅವರಿಂದ ತಬಲಾ ವಾದನ, 6 ಗಂಟೆಗೆ ನಾಗಲಕ್ಷ್ಮೀ ಮೈಸೂರು ಅವರಿಂದ ಹರಿಕೀರ್ತನೆ ನಡೆಯಲಿದೆ.
ಡಿ. 10ರಂದು ಬೆಳಗ್ಗೆ 9 ಗಂಟೆಗೆ ಪವಮಾನ ಹೋಮ, 12.30ಕ್ಕೆ ಮಹಾಮಂಗಳಾರತಿ, ಸಂಜೆ 4.30ಕ್ಕೆ ಅಮೃತಾ ಭಜನಾ ಮಂಡಳದಿಂದ ಭಜನೆ, 6 ಗಂಟೆಗೆ ನಾಗಲಕ್ಷ್ಮೀ ಮೈಸೂರು ಅವರಿಂದ ಹರಿಕೀರ್ತನೆ ನಡೆಯಲಿದೆ. ಡಿ. 11ರಂದು ಬೆಳಗ್ಗೆ 8 ಗಂಟೆಗೆ ರುದ್ರಸ್ವಾಹಾಕಾರ ಹೋಮ, ಸಂಜೆ 5 ಗಂಟೆಗೆ ಮದಿಹಾಳ ಭಜನಾ ಮಂಡಳದಿಂದ ಭಜನೆ, 6 ಗಂಟೆಗೆ ಹರಿಕೀರ್ತನೆ ನಡೆಯಲಿದೆ.
ಡಿ. 12ರಂದು ಬೆಳಗ್ಗೆ 9 ಗಂಟೆಗೆ ಧನ್ವಂತರಿ ಹೋಮ, 10 ಗಂಟೆಗೆ ಕುಂಕುಮಾರ್ಚನೆ, ಸಂಜೆ 4 ಗಂಟೆಗೆ ಅದಿತಿ ಜೋಶಿ ಅವರಿಂದ ಭರತನಾಟ್ಯ, 5 ಗಂಟೆಗೆ ತಾರಕೇಶ್ವರಿ ಭಜನಾ ಮಂಡಳಿಯಿಂದ ಭಜನೆ, 6 ಗಂಟೆಗೆ ಹರಿಕೀರ್ತನೆ ನಡೆಯಲಿದೆ. ಡಿ. 13ರಂದು ಬೆಳಗ್ಗೆ 9 ಗಂಟೆಗೆ ಅನ್ನಪೂರ್ಣೇಶ್ವರಿ ಹೋಮ, ಸಂಜೆ 5 ಗಂಟೆಗೆ ಅಶ್ವಥಪುರ ಭಜನಾ ಮಂಡಳದಿಂದ ಭಜನೆ, 6 ಗಂಟೆಗೆ ಹರಿಕೀರ್ತನೆ ನಡೆಯಲಿದೆ.
ಡಿ. 14ರಂದು ಬೆಳಗ್ಗೆ 7 ಗಂಟೆಗೆ ಅಖಂಡ ದಿಗಂಬರ ನಾಮ ಸಪ್ತಾಹ ಸಮಾಪ್ತಿ, 9 ಗಂಟೆಗೆ ದತ್ತಯಾಗ, ಮಧ್ಯಾಹ್ನ 4 ಗಂಟೆಗೆ ಹರಿಕೀರ್ತನೆ, ಸಂಜೆ 6.10ಕ್ಕೆ ಶ್ರೀ ದತ್ತ ಮಹಾರಾಜರ ತೊಟ್ಟಿಲೋತ್ಸವ, ಮಹಾಮಂಗಳಾರತಿ, ಬೆಳ್ಳಿ ಪಲ್ಲಕ್ಕಿ ಸೇವೆ ನಡೆಯಲಿದೆ.
ಡಿ. 15ರಂದು ಬೆಳಗ್ಗೆ 9 ಗಂಟೆಗೆ ಶ್ರೀ ಗುರುಚರಿತ್ರೆ ಪಾರಾಯಣ ಮಂಗಲ ಹಾಗೂ ಆಶೀರ್ವಚನ, ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ, 3 ಗಂಟೆಗೆ ಮಹಾಪ್ರಸಾದ ಹಾಗೂ ಸಂಜೆ 7 ಗಂಟೆಗೆ ಅಷ್ಟಾವಧಾನ ಸಹಿತ ಪಲ್ಲಕ್ಕಿ ಸೇವೆ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.