ಜಿಲ್ಲೆ

ಶ್ರೀ ಚೀರುಂಭ ಮಹಾನಡಾವಳಿ ಆಮಂತ್ರಣ ಬಿಡುಗಡೆ

Avinash R

ಕಾಸರಗೋಡು: ನಾರಾಯಣಮಂಗಲ ಶ್ರೀ ಚೀರುಂಭ ಭಗವತಿ ಕ್ಷೇತ್ರದಲ್ಲಿ 5 ವರ್ಷಗಳಿಗೊಮ್ಮೆ ನಡೆಯುವ ಮಹಾನಡಾವಳಿ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರದಲ್ಲಿ ಚಂದ್ರಶೇಖರ ಎಳೆ ಚೆಟ್ಟಿಯಾರ್ ಅವರಿಗೆ ಪ್ರಥಮ ಪ್ರತಿ ಹಸ್ತಾಂತರಿಸುವ ಮೂಲಕ ಕ್ಷೇತ್ರ ತಂತ್ರಿ ಉಳಾಲುಬೀಡು ಪ್ರಕಾಶ ಕಡಮಣ್ಣಾಯ ಬಿಡುಗಡೆಗೊಳಿಸಿದರು.

ಉತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಕೆ.ಮೋಹನ್‌ದಾಸ್ ಬೆಂಗಳೂರು ಪೂರ್ವಸಿದ್ಧತೆಗಳ ಬಗ್ಗೆ ಮಾಹಿತಿಯಿತ್ತರು. ಉತ್ಸವ ಸಮಿತಿ ಅಧ್ಯಕ್ಷ ಪ್ರಮೋದ್ ಅತ್ತಾವರ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಸಮಿತಿ ಅಧ್ಯಕ್ಷ ಪ್ರಭಾಕರ ಕೂಡ್ಲು, ಕರುಣಾಕರ ಕಾರ್ನವರ್, ವಿಶ್ವನಾಥ ಮಡೆಯ, ಉಪಾಧ್ಯಕ್ಷ ದೇವದಾಸ್ ಕುಂಟಂಗೇರಡ್ಕ, ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಎಂ.ನಾರಾಯಣ, ಕೃಷ್ಣರಾಜ್ ಪೆರ್ಲ, ದಿನೇಶ್ ಕುಂಟಂಗೇರಡ್ಕ, ವಕೀಲ ಗಣೇಶ್ ಬದಿಯಡ್ಕ, ಚಂದ್ರಶೇಖರ ಕುಂಟಂಗೇರಡ್ಕ, ದಯಾನಂದ ನಾಯ್ಕಪು, ಭರತೇಶ್, ಪ್ರಮೋದ್ ನಾಯ್ಕಪು, ರಮೇಶ ಎನ್, ಗುಲಾಬಿ ಲಕ್ಷ್ಮಣ, ಸುನೇತ್ರ ಸುವರ್ಣ, ಸುಶೀಲಾ ಬಂದ್ಯೋಡು, ಸಂಧ್ಯಾ ದಿನೇಶ್ ಮೊದಲಾದವರು ಉಪಸ್ಥಿತರಿದ್ದರು.

ಉತ್ಸವ ಸಮಿತಿ ಪ್ರಧಾನ ಸಂಚಾಲಕ ರವಿ ನಾಯ್ಕಪು ಸ್ವಾಗತಿಸಿದರು. ಕ್ಷೇತ್ರ ಸಮಿತಿ ಕಾರ್ಯದರ್ಶಿ ನರೇಂದ್ರ ಬದಿಯಡ್ಕ ವಂದಿಸಿದರು.