ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಶ್ರೀ ಉಳವಿ ಚನ್ನಬಸವೇಶ್ವರ ಧರ್ಮ ಫ0ಡ್ ಸಂಸ್ಥೆ ವತಿಯಿಂದ ಭಾರತ ಹುಣ್ಣಿಮೆ ಅಂಗವಾಗಿ ಇಲ್ಲಿನ ಶ್ರೀ ಉಳವಿ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಪಲ್ಲಕ್ಕಿ ಉತ್ಸವ ಗುರುವಾರ ಜರುಗಿತು.
ಜೋಯಿಡಾ ತಾಲೂಕಿನ ಶ್ರೀ ಕ್ಷೇತ್ರ ಉಳವಿಯಲ್ಲಿ ರಥೋತ್ಸವದ ನಿಮಿತ್ತ ಪ್ರತಿವರ್ಷದಂತೆ ಶ್ರೀ ಚನ್ನಬಸವೇಶ್ವರರ ಪಲ್ಲಕ್ಕಿ ಉತ್ಸವ ನಡೆಯಿತು. ದೇವಸ್ಥಾನದಿಂದ ಭಜನಾ ಮೇಳಗಳು ಹಾಗೂ ಕಲಾ ತಂಡದೊ0ದಿಗೆ ಹೊರಟ ಪಲ್ಲಕ್ಕಿ ಮೆರವಣಿಗೆ, ಮುಖ್ಯ ಅಂಚೆ ಬಳಿಯ ಶ್ರೀ ಚನ್ನಬಸವೇಶ್ವರ ವೃತ್ತ ತಲುಪಿ ಅಲ್ಲಿಂದ ದೇವಸ್ಥಾನಕ್ಕೆ ಮರಳಿತು.
ದೇವಸ್ಥಾನ ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಡಾ. ಎಸ್.ಆರ್. ರಾಮನಗೌಡರ, ವೀರಣ್ಣ ಗಟ್ಟಿಗೆನ್ನವರ, ಬಸನಗೌಡ ಕರಿಗೌಡರ, ಈಶ್ವರ ಹಳಕಟ್ಟಿ, ಬಸವರಾಜ ಸೂರಗೊಂಡ, ಸುರೇಶ ಹೆಗ್ಗೇರಿ, ವಿಜಯೇಂದ್ರ ಪಾಟೀಲ, ರಾಜು ಕೋಟಿ ಹಾಗೂ ನೂರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು.