ಮೈಸೂರು ಜಿಲ್ಲಾ ವಿದ್ಯುತ್ ಗುತ್ತಿಗೆದಾರರ ಸ್ನೇಹ ಬಳಗದ ವತಿಯಿಂದ ಕಡೇ ಆಷಾಢ ಶುಕ್ರವಾರದ ಪ್ರಯುಕ್ತ ಶ್ರೀ ಚಾಮುಂಡೇಶ್ವರಿ ಅಮ್ಮನವರ ಎರಡನೇ ವರ್ಷದ ಪೂಜಾ ಮಹೋತ್ಸವ ಹಾಗೂ ಅನ್ನಸಂತರ್ಪಣೆಯನ್ನು ಕಾರ್ಯಕ್ರಮ ನೆರವೇರಿತು.
ಉತ್ತನಹಳ್ಳಿ ತ್ರಿಪುರ ಸುಂದರಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ ಅನ್ನಸಂತರ್ಪಣೆಯಲ್ಲಿ ಭಕ್ತಾಧಿಗಳು ಪ್ರಸಾದ ಸ್ಪೀಕರಿದರು. ಜತೆಗೆ ವಿಶೇಷ ಪೂಜೆ ಸಲ್ಲಿಸಿದರು.
ಮನೆ ಮಂಚಮ್ಮ ದೇವಸ್ಥಾನ ಸೇವಾ ಟ್ರಸ್ಟ್ ಅಧ್ಯಕ್ಷ ಹುಯಿಲಾಳು ರಾಮಸ್ವಾಮಿ, ಕೆ.ಎಸ್.ಮಹದೇವಸ್ವಾಮಿ, ಪುಟ್ಟಸ್ವಾಮಿ, ವೆಂಕಟೇಶ್, ನಾಗರಾಜು, ಚೌಡೇಶ್, ಮೂರ್ಬಳ್ಳಿ ರವಿಕುಮಾರ್, ಜೆಟ್ಟಿಹುಂಡಿ ಸುನೀಲ್, ಹುಯಿಲಾಳು ಬಿ.ಎಸ್.ರಾಜು ಇತರರಿದ್ದರು.