ರಾಜಾ ತಿಮ್ಮಪ್ಪ ನಾಯಕ 
ಜಿಲ್ಲೆ

ಶ್ರೀ ಭಗಮ್ಮ ದೇವಿ ಜಾತ್ರೆ ಜೂ.3ರಿಂದ

ನರೇಶ್ ಕುಮಾರ್

ಅರಕೇರಾ: ಪಟ್ಟಣದ ಆರಾಧ್ಯ ದೇವತೆ ಶ್ರೀ ಭಗಮ್ಮ ದೇವಿ ಜಾತ್ರೋತ್ಸವ ಜೂ.3ರಿಂದ ಜರುಗಲಿದೆ ಎಂದು ಜಾತ್ರೋತ್ಸವ ಸಮಿತಿ ಅಧ್ಯಕ್ಷ ರಾಜಾ ತಿಮ್ಮಪ್ಪ ನಾಯಕ ಪೊಲೀಸ್ ಪಾಟೀಲ್ ಹಾಗೂ ಉಪಾಧ್ಯಕ್ಷ ಕೆ.ಅನಂತರಾಜ ನಾಯಕ ಹೇಳಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 13 ವರ್ಷಗಳ ನಂತರ ಜಾತ್ರೆ ಆಚರಿಸಲಾಗುತ್ತಿದೆ. ಜೂ.3 ಕ್ಕೆ ಬೆಳಗಿನ ಜಾವ ಮಾಜಿ ಸಂಸದ ಬಿ.ವಿ.ನಾಯಕ ಹಾಗೂ ಆರ್‌ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಎ.ರಾಜಶೇಖರ ನಾಯಕ ಅವರು ದೇಣಿಗೆ ನೀಡಿದ 5 ಕೆಜಿ ಬೆಳ್ಳಿ ದೇವಿ ಮೂರ್ತಿ ಅರ್ಪಣೆ ಕಾರ್ಯಕ್ರಮ ಜರುಗಲಿದೆ. ನಂತರ ಭಗಮ್ಮ ದೇವಿ ಪಟ್ಟಾಭಿಷೇಕ, ಶ್ರೀ ಗುಂಡು ಮಾರೆಮ್ಮ ದೇವಿ ಮತ್ತು ಶ್ರೀ ಪಾಲಕಮ್ಮ ದೇವಿ ಸೇವಾ ಕಾರ್ಯಕ್ರಮ ಜರುಗಲಿದೆ.

ಮಧ್ಯಾಹ್ನ ಶ್ರೀ ಕೆಂಚಮ್ಮ ದೇವಿ ಸೇವಾ ಕಾರ್ಯಕ್ರಮ, ಸಂಜೆ 4ರಿಂದ ಮರುದಿನ ಜೂ.4 ರಂದು ಬೆಳಗಿನ ಜಾವದವರೆಗೆ ಭಗಮ್ಮ ದೇವಿ ಬಿಂದಿಗೆ ಸೇವೆ ನಡೆಯಲಿದೆ. ಭಕ್ತರಿಂದ ನೈವೇದ್ಯ, ಮಂಗಳಾರತಿ, ಅನ್ನ ಸಂತರ್ಪಣೆ ಕಾರ್ಯ ಜರುಗಲಿದೆ. ಜೂ.5 ಕ್ಕೆ ವೀಳ್ಯಬಾಬತ್ತು, ಸತ್ಕಾರ ಕಾರ್ಯಕ್ರಮ ನೆರವೇರಲಿದೆ.

ಸಂಜೆ 5 ರಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭಗಮ್ಮ ದೇವಿಯ ಬಿಂದಿಗೆ ಸೇವೆ ಹೊರಟು ದೇವರ ಮನೆ ತಲುಪಲಿದೆ ಎಂದರು. ಪ್ರಮುಖರಾದ ರಾಜಾ ಸತ್ಯನಾರಾಯಣ ನಾಯಕ ಪೊಲೀಸ್ ಪಾಟೀಲ್, ಕೆ.ಅನಂತರಾಜ ನಾಯಕ, ವೆಂಕಟೇಶ ನಾಯಕ ದೊರೆ, ಹನುಮಂತ್ರಾಯ ನಾಯಕ ಪೊಲೀಸ್ ಪಾಟೀಲ್, ಚಂದ್ರಶೇಖರ ಶೆಟ್ಟಿ ಇದ್ದರು.