ಬೆಟ್ಟದ ಅರಸಮ್ಮ 
ಜಿಲ್ಲೆ

ಶ್ರೀ ಬೆಟ್ಟದರಸಮ್ಮ ಜಾತ್ರಾ ಮಹೋತ್ಸವಕ್ಕೆ ಚಾಲನೆ

ಹಲಗೂರು: ಏಳು ಗ್ರಾಮಗಳ ಆರಾಧ್ಯ ದೇವತೆ ಶ್ರೀ ಬೆಟ್ಟದರಸಮ್ಮ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ಚಾಲನೆ ದೊರೆತಿದ್ದು, ಒಂದು ವಾರ ನಿತ್ಯ ವಿವಿಧ ಪೂಜಾ ಕೈಂಕರ್ಯ ನೆರವೇರಲಿದೆ.

ಮಾ.12ರಂದು ಮೊದಲನೇ ಪೂಜೆ ನೆರವೇರಲಿದೆ. ಗ್ರಾಮದ ಮಧ್ಯ ಭಾಗದಲ್ಲಿರುವ ಕರಗದ ಮನೆಯಲ್ಲಿ ದೇವರ ಕರಗಕ್ಕೆ ಪೂಜೆ ನೆರವೇರಿದ ನಂತರ ಬೆಟ್ಟದ ತಪ್ಪಲ್ಲಲ್ಲಿರುವ ಬೆಟ್ಟದ ಅರಸಮ್ಮ ಸನ್ನಿಧಿಯಲ್ಲಿ ಬಾಯಿಬೀಗ ಹಾಗೂ ಪಂಜಿನ ಸೇವೆ ನಡೆಯುತ್ತದೆ. ರಾತ್ರಿ ಊರ್ಜಿ ನೆರವೇರಲಿದೆ. 15ರಂದು ತಟ್ಟೆಪೊಜೆ, 18ರಂದು ದೊಡ್ಡ ಜಾತ್ರೆ ಮತ್ತು ಕರಗೋತ್ಸವ, 19 ರಂದು ವಿಶೇಷ ಆರತಿ ಉತ್ಸವ ಹಾಗೂ ಕೊಂಡೋತ್ಸವ ನಡೆಯುವ ಮೂಲಕ ಜಾತ್ರೆ ಸಂಪನ್ನಗೊಳ್ಳಲಿದೆ.

ಹಲಗೂರು ಸೇರಿದಂತೆ ಗುಂಡಾಪುರ, ನಂದಿಪುರ, ಕೆಂಪಯ್ಯನ ದೊಡ್ಡಿ, ದೇವಿರಹಳ್ಳಿ, ದಳವಾಯಿ ಕೋಡಿಹಳ್ಳಿ, ಬಾಳೆಹೊನ್ನಿಗ, ಎಚ್. ಬಸಾಪುರ, ಹಗಾದೂರು, ಬಸವನಹಳ್ಳಿ ಮತ್ತು ಇತರೆ ಅಕ್ಕಪಕ್ಕ ಗ್ರಾಮದವರು ಸೇರಿ ಈ ಹಬ್ಬವನ್ನು ಆಚರಿಸುತ್ತಾರೆ. ದೊಡ್ಡ ಜಾತ್ರೆಯ ದಿನ ಗುಂಡು ಎತ್ತುವುದು, ಉಯ್ಯಲೆ ಆಡಲಾಗುತ್ತದೆ. ಬಾಯಿ ಬೀಗ, ಪಂಜಿನ ಸೇವೆ, ತಲೆಮುಡಿ ಸೇವೆ ಕಾರ್ಯಕ್ರಮಗಳೂ ನೆರವೇರಲಿದೆ.