ಜಿಲ್ಲೆ

ಶ್ರೀ ಬಸವೇಶ್ವರ ಜಾತ್ರೆ ಆರಂಭ

ಬೈಲಹೊಂಗಲ: ತಾಲೂಕಿನ ಕಲ್ಲೂರ ಗ್ರಾಮದಲ್ಲಿ ಬಸವ ಜಯಂತಿ ನಿಮಿತ್ತ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ ಏ.28ರಿಂದ ಆರಂಭಗೊಂಡಿದ್ದು, ಮೇ 2ರ ವರೆಗೆ ಅದ್ದೂರಿಯಾಗಿ ಜರುಗಲಿದೆ. ಪ್ರತಿದಿನ 7ರಿಂದ 8.30ರ ವರೆಗೆ ಪ್ರವಚನ ಕಾರ್ಯಕ್ರಮ ಜರುಗಲಿದ್ದು, ಏ.29ರಂದು ಕುಂಭೋತ್ಸವ ಹಾಗೂ ಊಟದ ಹಾಲ್​ ಉದ್ಘಾಟನೆ, ಏ.30ರಂದು ಶ್ರೀ ಬಸವೇಶ್ವರ ಗದ್ದುಗೆಗೆ ರುದ್ರಾಭಿಷೇಕ, ಪಲ್ಲಕ್ಕಿ ಉತ್ಸವ, ಮೇ 1ರಂದು ಮಹಾರಥೋತ್ಸವ, ರಾತ್ರಿ 8 ಗಂಟೆಗೆ ರಸಮಂಜರಿ ಕಾರ್ಯಕ್ರಮ, ಮೇ2ರಂದು ಪ್ರವಚನ ಮಂಗಲೋತ್ಸವ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.