ಮುಂಡರಗಿ: ಪಟ್ಟಣದ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದ ಲಕ್ಷ ದೀಪೋತ್ಸವ ಪ್ರಯುಕ್ತ ಕುಂಭೋತ್ಸವ ಹಾಗೂ ವಾದ್ಯಮೇಳದೊಂದಿಗೆ ಶ್ರೀ ಅಯ್ಯಪ್ಪಸ್ವಾಮಿ ಭಾವಚಿತ್ರ ಉತ್ಸವವು ಶನಿವಾರ ಶ್ರದ್ಧಾ ಭಕ್ತಿಯಿಂದ ಜರುಗಿತು.
ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಮಠದಿಂದ ಹೊರಟ ಉತ್ಸವಕ್ಕೆ ನಾಡೋಜ ಡಾ.ಅನ್ನದಾನೀಶ್ವರ ಶಿವಯೋಗಿಗಳು ಚಾಲನೆ ನೀಡಿದರು. ಉತ್ಸವವು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅಯ್ಯಪ್ಪಸ್ವಾಮಿ ದೇವಸ್ಥಾನ ತಲುಪಿತು. ನಂತರ ಡಾ.ಅನ್ನದಾನೀಶ್ವರ ಶಿವಯೋಗಿಗಳ ಪಾದಪೂಜೆ ನೆರವೇರಿಸಿ ಮಹಾಪ್ರಸಾದ ನಡೆಯಿತು. ಲಕ್ಷ ದೀಪೋತ್ಸವ ಹಿನ್ನೆಲೆ ದೇವಸ್ಥಾನದಲ್ಲಿ ಬೆಳಗ್ಗೆಯಿಂದ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಮಂಗಳೂರಿನ ಕಲ್ಲಾಪು ಶ್ರೀ ವೀರಭದ್ರ ಮಹಮ್ಮಾಯಿ ಚೆಂಡೆ ಕಲಾ ತಂಡದ ವಾದ್ಯಮೇಳ ಗಮನ ಸೆಳೆಯಿತು.
ಅಯ್ಯಪ್ಪಸ್ವಾಮಿ ದೇವಸ್ಥಾನ ಧರ್ಮದರ್ಶಿ ಮಂಜುನಾಥ ಗುರುಸ್ವಾಮಿ, ಲಕ್ಷ ದೀಪೋತ್ಸವ ಸಮಿತಿ ಅಧ್ಯಕ್ಷ ಸತೀಶ ಕಂಚಗಾರ, ಹನುಮಂತಸ್ವಾಮಿ ಕುಕನೂರ, ಕಾರ್ಯದರ್ಶಿ ನಾರಾಯಣಸ್ವಾಮಿ ಅಳವಂಡಿ, ಸಹಕಾರ್ಯದರ್ಶಿ ಸಚೀನಸ್ವಾಮಿ ಮೇಟಿ, ಖಜಾಂಚಿ ಶಿವಾನಂದಸ್ವಾಮಿ ಪುರದ, ಪ್ರಶಾಂತಸ್ವಾಮಿ ಅಳವಂಡಿ, ಮಹೇಶಸ್ವಾಮಿ ಬಡಿಗೇರ ಇತರರು ಇದ್ದರು.