ಜಿಲ್ಲೆ

ಅಶ್ವತ್ಥ ವಕ್ಷದಲ್ಲಿ ಭಗವಂತನ ಸಾನ್ನಿಧ್ಯ: ಕಾಣಿಯೂರು ಶ್ರೀ ಆಶೀರ್ವಚನ

ಸೌಮ್ಯ ಆರ್

ಕಡಬ: ಹಿಂದು ಧರ್ಮದಲ್ಲಿ ವೃಕ್ಷಗಳನ್ನು ದೇವತೆಗಳ ಪ್ರತಿರೂಪ ಎಂದು ಪೂಜಿಸಲಾಗುತ್ತದೆ. ಅಂತಹ ಒಂದು ಪವಿತ್ರವಾದ ವೃಕ್ಷ ಎಂದರೆ ಅಶ್ವತ್ಥ ವಕ್ಷ. ಅಶ್ವತ್ಥ ವಕ್ಷದಲ್ಲಿ ಎಲ್ಲ ದೇವತೆಗಳು ನೆಲೆಸಿರುತ್ತಾರೆ. ಅಶ್ವತ್ಥ ವಕ್ಷದಲ್ಲಿ ಭಗವಂತನ ಸಾನ್ನಿಧ್ಯವಿದೆ ಎಂದು ಕಾಣಿಯೂರು ಶ್ರೀ ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಹೇಳಿದರು.

ಕಾಣಿಯೂರು ಶ್ರೀ ಅಶ್ವತ್ಥ ಉಪನಯನ ವಿವಾಹ ಸಮಿತಿ ವತಿಯಿಂದ ಕಾಣಿಯೂರಿನಲ್ಲಿ ಶ್ರೀ ಅಶ್ವತ್ಥ ಉಪನಯನ ಹಾಗೂ ವಿವಾಹ ಸಮಾರಂಭದ ಪ್ರಯುಕ್ತ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪುರೋಹಿತರು, ದೈವಜ್ಞ ವಿಶ್ವಮೂರ್ತಿ ಬಡೆಕಿಲ್ಲಾಯ ಸವಣೂರು ಅವರು ಅಶ್ವತ್ಥ ಉಪನಯನ ಮತ್ತು ವಿವಾಹ ಮಹತ್ವ ಕುರಿತು ಉಪನ್ಯಾಸ ನೀಡಿದರು. ಕಾಣಿಯೂರು ಶ್ರೀ ಅಶ್ವತ್ಥ ಉಪನಯನ ವಿವಾಹ ಸಮಿತಿಯ ಚಂದ್ರಶೇಖರ ಗೌಡ ಅಧ್ಯಕ್ಷತೆ ವಹಿಸಿದ್ದರು. ಅರ್ಚಕ ಸುಬ್ರಹ್ಮಣ್ಯ ಉಪಾಧ್ಯಾಯ ಕಲ್ಪಡ ಶುಭಹಾರೈಸಿದರು. ಕಾಣಿಯೂರು ಶ್ರೀ ಅಶ್ವತ್ಥ ಉಪನಯನ ವಿವಾಹ ಸಮಿತಿ ಗೌರವಾಧ್ಯಕ್ಷ, ಕಾಣಿಯೂರು ಶ್ರೀ ಮಠದ ವ್ಯವಸ್ಥಾಪಕ ಶ್ರೀನಿಧಿ ಆಚಾರ್ಯ, ಏಲಡ್ಕ ಶ್ರೀರಾಡಿ ರಾಜನ್ ದೈವಸ್ಥಾನ ಆನುವಂಶೀಯ ಮೊಕ್ತೇಸರರಾದ ರೋಹಿತ್ ಅನಿಲ, ವಸಂತ ಕಂಪ, ಅಧ್ಯಕ್ಷ ಕೇಶವ ಗೌಡ ಕಟ್ಟತ್ತಾರು, ಶ್ರೀ ಅಶ್ವತ್ಥ ಉಪನಯನ ವಿವಾಹ ಸಮಿತಿ ಕೋಶಾಧಿಕಾರಿ ಪುಟ್ಟಣ್ಣ ಗೌಡ ಮುಗರಂಜ ಉಪಸ್ಥಿತರಿದ್ದರು. ಸಮಿತಿ ಕಾರ್ಯದರ್ಶಿ ಪದ್ಮಯ್ಯ ಗೌಡ ಅನಿಲ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಧಮೇರ್ಂದ್ರ ಗೌಡ ಕಟ್ಟತ್ತಾರು ವಂದಿಸಿದರು. ಕಾಣಿಯೂರು ಶ್ರೀ ಲಕ್ಷ್ಮೀ ನರಸಿಂಹ ಭಜನಾ ಮಂಡಳಿ ಮಾಜಿ ಅಧ್ಯಕ್ಷ ಪರಮೇಶ್ವರ ಅನಿಲ ನಿರೂಪಿಸಿದರು.

ಜಮ್ಮು ಕಾಶ್ಮೀರದಲ್ಲಿ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಯಾವ ಧರ್ಮ ಎಂದು ಕೇಳಿ ಗುಂಡು ಹಾರಿಸಿದ್ದಾರೆ. ಬಹಳ ದುಃಖವಾಗುತ್ತದೆ ಎಂದವರು ಪರೀಕ್ಷಾ ಕೇಂದ್ರದಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರವನ್ನು ತೆಗೆಸಿದ್ದಾರೆ. ಇಂತಹ ದುರಂತ ರಾಜ್ಯದಲ್ಲಿ, ದೇಶದಲ್ಲಿ ನಡೆಯುತ್ತಿದೆ ಎಂದರೆ ಒಟ್ಟಿನಲ್ಲಿ ಹಿಂದು ಧರ್ಮವನ್ನು ಹೊಡೆಯುವ ಷಡ್ಯಂತರ ಇದು. ಮನೆಯಿಂದ ಹೊರಗೆ ಬಂದಾಗ ನಾವೆಲ್ಲರೂ ಒಂದು ಎಂಬ ಭಾವನೆಯು ನಮ್ಮಲ್ಲಿ ಬಂದಾಗ ಖಂಡಿತವಾಗಿಯೂ ಹಿಂದು ಧರ್ಮ ಉಳಿಯಲು ಸಾಧ್ಯವಿದೆ. ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ https://www.vijayavani.net/candlelight-vigil-to-pay-tribute-to-those-killed-in-terrorist-attacks-2 https://www.vijayavani.net/lake-development